More

  ಕಾಂಗ್ರೆಸ್​ನವರು ದೇಶ ಭಕ್ತರಲ್ಲವಾ ? ಬಿಜೆಪಿಗೆ ಲಕ್ಷ್ಮಣ ಸವದಿ ಪ್ರಶ್ನೆ


  ಕೊಪ್ಪಳ: ಬಿಜೆಪಿ ದೇಶ ಭಕ್ತಿ ಗುತ್ತಿಗೆ ಪಡೆದಿಲ್ಲ. ದೇಶ ರಸುವ ತಾಕತ್ತು ಕಾಂಗ್ರೆಸ್​ಗಿದೆ. ಯಡಿಯೂರಪ್ಪ ಕೊಪ್ಪಳಕ್ಕೆ ಬಂದಾಗ ಮೋದಿಗೆ ಯಾಕೆ ಮತ ನೀಡಬೇಕೆಂದು ಕೇಳಿ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಟಾಂಗ್​ ನೀಡಿದರು.

  ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದರು.

  ಬಿಜೆಪಿಗರು ಮೋದಿ ಪಿಎಂ ಆದರೆ ಡಾಲರ್​, ಪೆಟ್ರೋಲ್​, ಡಿಸೇಲ್​ ದರ ಇಳಿಯಲಿದೆ. ಕಪ್ಪು ಹಣ ಬರಲಿದೆ. ಬುಲೆಟ್​ ರೈಲು ಬರುತ್ತದೆ. ನದಿ ಜೋಡಣೆ ಆಗುತ್ತದೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಇಂದು ಅವೆಲ್ಲ ಹೆಚ್ಚಳವಾಗಿವೆ. ಹೊಸ ಪ್ರಣಾಳಿಕೆಯಲ್ಲೂ ಬುಲೆಟ್​ ಟ್ರೈನ್​ ಸೇರಿಸಿದ್ದಾರೆ. ಇಷ್ಟು ವರ್ಷ ತರದವರು ಇನ್ನು ಮುಂದೆ ತರುವ ಭರವಸೆ ಇಲ್ಲ. 219 ಸ್ಥಾನಕ್ಕೆ ಕುಸಿಯಲಿದ್ದಾರೆ. ಕೊಪ್ಪಳದ ಬಿಜೆಪಿ ಅಭ್ಯರ್ಥಿ ವೈದ್ಯ. ಕರೊನಾದಲ್ಲಿ ಎಷ್ಟು ಜನರ ಪ್ರಾಣ ಉಳಿಸಿದ್ದಾನೆ ? ಹೇಗೆ ದುಡ್ಡು ಮಾಡಿದ್ದಾನೆ ಎಂದೆಲ್ಲ ಜನರಿಗೆ ಗೊತ್ತಿದೆ. ಜನರು ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದರು.

  ಕಾಂಗ್ರೆಸ್​ನವರು ದೇಶ ಭಕ್ತರಲ್ಲವಾ ? ಬಿಜೆಪಿಗೆ ಲಕ್ಷ್ಮಣ ಸವದಿ ಪ್ರಶ್ನೆ

  ಸಚಿವ ಜಮೀರ್​ ಖಾನ್​ ಮಾತನಾಡಿ, ಬಿಜೆಪಿ ಯಾವ ಸಾಧನೆ ಮಾಡಿಲ್ಲ. ನಾವು ಗ್ಯಾರಂಟಿ ಯೋಜನೆ ಅನುಷ್ಠಾನ ಸೇರಿ ಸಾಕಷ್ಟು ಕೆಲಸ ಮಾಡಿದ್ದೇವೆ. ಸ್ಲಂಬೋರ್ಡ್​ನಿಂದ 1.80 ಲಕ್ಷ ಮನೆ ಮಂಜೂರಾಗಿವೆ. ಅವುಗಳ ಅನುಷ್ಠಾನಕ್ಕೆ ಸಿಎಂ 7400 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿ 500 ಕೋಟಿ ಬಿಡುಗಡೆ ಮಾಡಿದ್ದಾರೆ. 36 ಸಾವಿರ ಮನೆ ಮಂಜೂರಾಗಿದ್ದು, ಇದು ನಮ್ಮ ಆರನೇ ಗ್ಯಾರಂಟಿ. ಜೆಡಿಎಸ್​, ಬಿಜೆಪಿಗೆ ಬಡವರ ಕಾಳಜಿ ಇಲ್ಲ. ಜನ ಅಭಿವೃದ್ಧಿಗಾಗಿ ಕಾಂಗ್ರೆಸ್​ಗೆ ಮತ ಹಾಕಿ ಎಂದು ಮನವಿ ಮಾಡಿದರು.

  ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಎಲ್ಲ ಇಲಾಖೆಗಳು ಅಭಿವೃದ್ದಿ ಯೋಜನೆ ಹಾಕಿಕೊಂಡಿವೆ. ಸುಳ್ಳಿನ ಬಿಜೆಪಿಗೆ ಮತ ಹಾಕಬೇಡಿ. ಕೆಲಸ ಮಾಡಿದವರಿಗೆ ಆಶೀರ್ವಾದ ಮಾಡಿ ಎಂದರು.
  ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ, ಸಚಿವರಾದ ಶಿವರಾಜ ತಂಗಡಗಿ, ಬಿ.ನಾಗೇಂದ್ರ, ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಮಾತನಾಡಿದರು.

  ಕಾಂಗ್ರೆಸ್​ನವರು ದೇಶ ಭಕ್ತರಲ್ಲವಾ ? ಬಿಜೆಪಿಗೆ ಲಕ್ಷ್ಮಣ ಸವದಿ ಪ್ರಶ್ನೆ

  ಶಾಸಕ ಬಿ.ಎಂ.ನಾಗರಾಜ, ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೆಎಂಎ್​ ಅಧ್ಯಕ್ಷ ಭೀಮಾ ನಾಯ್ಕ, ಶಾಸಕರಾದ ಹಂಪನಗೌಡ ಬಾದರ್ಲಿ, ರಾವೇಂದ್ರ ಹಿಟ್ನಾಳ ಬಸನಗೌಡ ತುರ್ವಿಹಾಳ, ಪ್ರಮುಖರಾದ ಬಸನಗೌಡ ಬಾದರ್ಲಿ, ಎಂ.ಮಲ್ಲಿಕಾರ್ಜುನ ನಾಗಪ್ಪ, ಎಚ್​.ಆರ್​.ಶ್ರೀನಾಥ, ಮಾಲತಿ ನಾಯಕ, ಬಸವರಾಜಸ್ವಾಮಿ ಮಳೇಮಠ ಇತರರಿದ್ದರು.

  ಕಾಂಗ್ರೆಸ್​ನವರು ದೇಶ ಭಕ್ತರಲ್ಲವಾ ? ಬಿಜೆಪಿಗೆ ಲಕ್ಷ್ಮಣ ಸವದಿ ಪ್ರಶ್ನೆ

  ಹಾಸ್ಯದಲ್ಲೇ ಟಾಂಗ್​ ನೀಡಿದ ರಾಯರಡ್ಡಿ
  ನಾನು ಮಂತ್ರಿ ಆಗಬೇಕೆಂದು ಬಯಸಿಲ್ಲ. ಹಾಗದ್ದರೆ ಮೊದಲೇ ಹೇಳುತ್ತಿದ್ದೆ. ಸಿಎಂ ಆರ್ಥಿಕ ಸಲಹೆಗಾರ ಹುದ್ದೆಗೂ ರಾಜೀನಾಮೆ ನೀಡುವೆ. ಸಿದ್ದರಾಮಯ್ಯ ಇನ್ನು ನಾಲ್ಕು ವರ್ಷ ಸಿಎಂ ಆಗಿರಬೇಕೆಂದರೆ ಕೊಪ್ಪಳದಲ್ಲಿ ಕಾಂಗ್ರೆಸ್​ ಗೆಲ್ಲಬೇಕು. ಗಂಗಾವತಿಯಲ್ಲಿ ಅನ್ಸಾರಿ ಸಹ ಪಕ್ಷದ ಕೆಲಸ ಮಾಡುತ್ತಾರೆ. ಮನೆ ಅಂದ ಮೇಲೆ ಸಣ್ಣ ಪುಟ್ಟ ಸಿಟ್ಟು ಇರುತ್ತದೆ. ಹಾಗಂತ ವಿರುದ್ಧ ಕೆಲಸ ಮಾಡುವುದಿಲ್ಲ. ಶಾಸಕ ರಾಘವೇಂದ್ರ ಹಿಟ್ನಾಳಗೆ ಬೈದು ಹೇಳುವೆ. ಅವನು ತಪ್ಪಾಯ್ತು ಅಣ್ಣಾ ಅಂದ. ಆತನಿಗೆ ಅಣ್ಣ&ತಮ್ಮ ಎಂಬ ಎರಡು ಮಾತು ಗೊತ್ತಿವೆ. ಹಾಗೆ ಹೇಳಿ ಎಲ್ಲರಿಗೂ ಎಣ್ಣೆ ಹಾಕಿ ಸರಿಮಾಡಿಬಿಡುತ್ತಾನೆಂದು ಶಾಸಕ ಜನಾರ್ದನ ರೆಡ್ಡಿಗೆ ಟಾಂಗ್​ ನೀಡುತ್ತಲೇ ಪರೋಕ್ಷವಾಗಿ ತಮ್ಮ ಸಿಟ್ಟು ಹೊರ ಹಾಕಿದರು. ಸಮಾವೇಶದಲ್ಲಿ ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ ಗೈರು ಎದ್ದು ಕಾಣುತ್ತಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts