ಕೊಪ್ಪಳ: ನಗರಸಭೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ನ)-2.0 ಸಂಬಂಧಿಸಿದ ಐ.ಇ.ಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪುಗಳ ಸದಸ್ಯರ ನೇಮಕಾತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳ ನಗರಸಭೆಯಲ್ಲಿ 3 ವರ್ಫಿಗಳ ಜೊತೆಗೆ ಪೂರ್ಣಾವಧಿಗೆ ಐ.ಇ.ಸಿ ಚಟುವಟಿಕೆಗಳನ್ನು ಕೈಗೊಳ್ಳಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ನಲ್ಮ್-ಡೇ ಅಡಿಯಲ್ಲಿ ನೋಂದಾಯಿಸಿದ ಸ್ವಸಹಾಯ ಗುಂಪಿನ ಸದಸ್ಯರು ಅರ್ಜಿ ಸಲ್ಲಿಸಬಹುದು.
ನಗರಸಭೆಯಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯಲ್ಲಿ ನಲ್ಮ್-ಡೇಯ ಹಿಂಬರಹದೊಂದಿಗೆ ವಿವರಗಳನ್ನು ಭರ್ತಿಮಾಡಿ ಗುರುತಿನ ಪುರಾವೆ, ವಿಳಾಸದ ಪುರಾವೆ, ಅರ್ಹತಾ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವುದಕ್ಕೆ (ಎಂಪ್ಯಾನಲ್) ದಾಖಲೆಗಳು, ಶೈಕ್ಷಣಿಕ ಅರ್ಹತೆ (ಎಸ್ಎಸ್ಎಲ್ಸಿ ಜೊತೆಗೆ ಈ ವಿಫಿಯದ ಕುರಿತು ತಿಳುವಳಿಕೆ ಹೊಂದಿರತಕ್ಕದ್ದು), ನಲ್ಮ್-ಡೇಯಿಂದ ಬೇರೆ ಕೆಲಸವನ್ನು ನಿರ್ವಹಿಸಿದ ಅನುಭವ ಪತ್ರದ ಪ್ರತಿಗಳೊಂದಿಗೆ ಮೇ 30ರ ಸಂಜೆ 5 ಗಂಟೆಯ ಒಳಗಾಗಿ ನಗರಸಭೆಯ ಆರೋಗ್ಯ ಶಾಖೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ನಗರಸಭೆಯ ಅಧಿಕೃತ ಇ-ಮೇಲ್ ವಿಳಾಸ itstaff ulb [email protected]ಮತ್ತು [email protected] ವಿಳಾಸಗಳಿಗೆ ಅರ್ಜಿಯನ್ನು ಕಳುಹಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ವಿಫಿಯದ ಕುರಿತು ಅವರ ತಿಳುವಳಿಕೆಯನ್ನು ರ್ನಿಣಯಿಸಲು ಸಂದರ್ಶನಕ್ಕೆ ಕರೆಯಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.