ಕೊಪ್ಪಳ: ಮೋಟಾರು ವಾಹನಗಳ ಕಾಯ್ದೆ-1988 ರನ್ವಯ ಅಪ್ರಾಪ್ತ ವಾಹನ ಚಾಲನೆಗೆ ಅವಕಾಶ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪೋಫಿಕರು ಹಾಗೂ ವಾಹನ ಮಾಲೀಕರು ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಅಥವಾ ಅನುಮತಿ ನೀಡದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಮೋಟಾರು ವಾಹನಗಳ ಕಾಯ್ದೆ-1988 ರನ್ವಯಮಕ್ಕಳು ವಾಹನ ಚಲಾಯಿಸಿದಲ್ಲಿ ಕಲಂ 188(5) ರಡಿ ವಾಹನ ಮಾಲೀಕರಿಗೆ ರೂ.1000 ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ, ಪರವಾನಗಿ ಇಲ್ಲದೇ ವಾಹನ ಚಲಾಯಿಸಿದ್ದಕ್ಕಾಗಿ ಚಲಾಯಿಸಿದ ವ್ಯಕ್ತಿಗೆ ಕಲಂ 181(4) ರಡಿ ರೂ.500 ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒಂದು ವೇಳೆ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸಿ ಅಪಘಾತ ಎಸಗಿದಲ್ಲಿ ಈ ಅಪಘಾತದಿಂದಾಗುವ ನಫ್ಟಿವನ್ನು ವಾಹನ ಮಾಲೀಕರಿಂದ ಭರಿಸಬಹುದಾಗಿದೆ.
2021 ರಲ್ಲಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ: 275/2021(ಎಂ.ವಿ.ಸಿ.)ರಲ್ಲಿ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ ತಂ. ಅಯ್ಯನಗೌಡ ಪಾಟೀಲ್ ಎಂಬುವವರು ದಿನಾಂಕ:10.03.2021 ರಂದು ಯಲಬುರ್ಗಾ ಪಟ್ಟಣದ ರಸ್ತೆಯೊಂದರ ಎಡಬದಿಯಲ್ಲಿ ನಿಂತು ಮಾತನಾಡುತ್ತಿರುವಾಗ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಅತಿ ವೇಗವಾಗಿ ಹಾಗೂ ಅಲಕ್ಷ??ತನದಿಂದ ಪ್ಯಾಸೆಂಜರ್ ಆಟೋವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದು, ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನವನ್ನು ಚಲಾಯಿಸಲು ನೀಡಿದ ಆಟೋ ರಿಕ್ಷಾದ ಮಾಲೀಕರಿಗೆ ರೂ.1,41,61,580/- ಗಳ ಪರಿಹಾರ ಧನವನ್ನು ಮೃತರ ಕುಟುಂಬಕ್ಕೆ ನೀಡುವಂತೆ ಆದೇಶಿಸಿರುತ್ತಾರೆ.
ಆದ್ದರಿಂದ ಪೋಫಿಕರು ಹಾಗೂ ವಾಹನ ಮಾಲೀಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಅಥವಾ ಅನುಮತಿ ನೀಡಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೋರಿದ್ದಾರೆ.