More

    ಮಹಿಳೆ ಮಾಂಗಲ್ಯ ಸರ ಎಗರಿಸಿದ ಕಳ್ಳರು

    ಕೊಪ್ಪಳ: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಮನೆ ಮುಂದೆಯೇ ನಿಂತಿದ್ದ ಮಹಿಳೆ ಮಾಂಗಲ್ಯ ಸರವನ್ನು ಬೈಕ್​ನಲ್ಲಿ ಬಂದ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ನಗರದ ಟೀಚರ್ಸ್​ ಕಾಲನಿಯಲ್ಲಿ ಟನೆ ನಡೆದಿದೆ. ಮಂಜುಳಾ ಹಿರೇಮಠ ಎಂಬುವರು ಸರ ಕಳೆದುಕೊಂಡವರು. ಐವತ್ತು ಗ್ರಾಂ ತೂಕದ ಮಾಂಗಲ್ಯ ಸರ ಧರಿಸಿದ್ದರು. ಮನೆ ಮುಂದೆ ನಿಂತಿದ್ದಾಗ ಬೈಕ್​ನಲ್ಲಿ ಹೆಲ್ಮೇಟ್​ ಧರಿಸಿಕೊಂಡು ಬಂದ ಕಳ್ಳರು ಮೊದಲು ಮುಂದಿನಿಂದ ಹಾದು ಹೋಗಿದ್ದಾರೆ. ವಾಪಸ್​ ಬಂದು ಕಿತ್ತುಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ. ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಗಲಿನಲ್ಲೇ ಈ ರೀತಿ ದರೋಡೆ ನಡೆದರೆ ಹೇಗೆಂದು ಭಯಬೀತರಾಗಿದ್ದಾರೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.

    See also  ಜಿಲ್ಲಾದ್ಯಂತ ದೀಪಗಳ ಹಬ್ಬದ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts