ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ನಿಂದ್ ಫೆ.9 ರಂದು ಮುಂಜಾನೆ 10.30ಕೆ ಜಿಲ್ಲಾ ಮಟ್ಟದ ಮುಕ್ತ ಚುಟುಕು ಕವಿಗೋಷ್ಠಿ , ಉಪನ್ಯಾಸ ಹಾಗೂ ಮಾಧ್ಯಮ ಅಕಾಡೆಮಿ ಪುರಸ್ಕತ ರಿಗೆ ಸನ್ಮಾನ ಸಮಾರಂಭ ಇರಲಿದೆ.
ಭಾಗ್ಯನಗರದ ಶ್ರೀರಾಮ ಬಡಾವಣೆಯ ಹಿರಿಯ ಸಾಹಿತಿ ಶಿ.ಕಾ ಬಡಿಗೇರ ಅವರ ಮನೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಬೆಳೆದು ಬಂದ ಹೆಜ್ಜೆಗಳು ಕುರಿತು ಸಾಹಿತಿ ಕಲ್ಲಪ್ಪ ಕವಳಕೇರಿ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಮಟ್ಟದ ಮುಕ್ತ ಚುಟುಕು ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಇದೇ ವೇಳೆ ಪ್ರಸಕ್ತ ಅವಧಿಯಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾದ ಸಿರಾಜ್ ಬಿಸರಳ್ಳಿ, ಹರೀಶ್ ಎಚ್.ಎಸ್. ಹಾಗೂ ಅಖಿಲ ಹುಡೇವು ಇವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಸಾಹಿತಿ ಈರಪ್ಪ ಬಿಜಲಿ, ರವಿಕಾಂತನವರ, ವಕೀಲ ವಿಜಯ ಅಮೃತರಾಜ್, ವೀರಣ್ಣ ಹುರಕಡ್ಲಿ , ಎಸ್. ಎನ್.ಮಾರಯ್ಯ , ಯುವ ಮುಖಂಡ ಮಹಬೂಬ ಖಾನ್ ಮುಂತಾದವರು ಭಾಗವಹಿಸಲಿದ್ದಾರೆಂದು ಆಯೋಜಕ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ.