ಕೊಪ್ಪಳ: ಅಂಬೇಡ್ಕರ್ ಬಗ್ಗೆ ದ್ವೇಷ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಿ ಎಸ್ಡಿಪಿಐ ಜಿಲ್ಲಾ ಸಂಚಾಲಕರು ಭಾನುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂಸತ್ನಲ್ಲಿ ಅಮಿತ್ ಶಾ ಅಮಬೇಡ್ಕರ್ ಬದಲು ದೇವರ ಜಪ ಮಾಡಲು ತಿಳಿಸಿದ್ದಾರೆ. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ. ರಾಜ್ಯದ ಪರಿಷತ್ನಲ್ಲಿ ವಿಪ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಬಗ್ಗೆ ತುಚ್ಯವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಪದೇ ಪದೆ ಅಸಂವಿಧಾನಿಕ ಪದ ಬಳಕೆ ಮಾಡುತ್ತಿದ್ದಾರೆ. ಇವೆಲ್ಲವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ಬಿಜೆಪಿಗರು ಮನುಸ್ಮ$ತಿ, ಸಂ ಪರಿವಾರದ ಚಿಂತನೆಯಲ್ಲಿದ್ದಾರೆ. ಅವರಿಗೆ ಅಧಿಕಾರ ನೀಡಿರುವುದು ಸಂವಿಧಾನ ಎಂಬುದನ್ನು ಮರೆತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ತಕ್ಷಣ ದೇಶದ ಜನರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಎಸ್ಡಿಪಿಐ ಕೊಪ್ಪಳ ವಿಧಾನ ಸಭಾ ಅಧ್ಯಕ್ಷ ಸಲೀಂ ಖಾದ್ರಿ, ಪ್ರಮುಖರಾದ ರಾು ಚಾಕ್ರಿ, ಕಾಶಪ್ಪ, ಮುಹಮ್ಮದ್ ಸಾಧಿಕ್, ನಿಜಾಮುದ್ದಿನ್ ಮಾಳೆಕೊಪ್ಪ, ಫಾರೂಕ್ ಅತ್ತಾರ, ಅರ್ಷದ್ ಶೈಖ್, ಪ್ರಕಾಶ್ ಬೆಲ್ಲದ ಇತರರಿದ್ದರು.