ವಿಜಯಪುರ: ಐತಿಹಾಸಿಕ ನಗರಿಯ ವಿವಿಧ ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಶನಿವಾರ ಭೇಟಿ ನೀಡಿ ವೀಕ್ಷಿಸಿದರು.
ನಗರದಲ್ಲಿರುವ ಆದಿಲ್‌ಶಾಹಿ ಸುಲ್ತಾನರ ಕಾಲದ ಸ್ಮಾರಕಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ಮಾರಕಗಳ ಸ್ಥಿತಿಗತಿ, ಪ್ರವಾಸಿಗರ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು.
ಬೆಳಗ್ಗೆಯೇ ಅಧಿಕಾರಿಗಳು ಮತ್ತು ಇತಿಹಾಸ ತಜ್ಞರು ಮತ್ತು ಸಂಶೋಧಕರೊಂದಿಗೆ ಪ್ರಯಾಣ ಬೆಳೆಸಿದ ಜಿಲ್ಲಾಧಿಕಾರಿಗಳು ಐತಿಹಾಸಿಕ ಸ್ಮಾರಕಗಳಾದ ಸುರಂಗ ಬಾವಡಿ, ಖಾನ್ ಸರೋವರ, ಸಾಟ್ ಖಬರ್ ಬಾವಡಿ, ಇಬ್ರಾಹಿಂ ಸರೋವರ, ರಾಮಲಿಂಗ ಕೆರೆ ಮತ್ತು ಹಾಥಿ ಬಾವಡಿ ಸೇರಿದಂತೆ ಹಲವು ಸ್ಮಾರಕಗಳನ್ನು ಪರಿಶೀಲಿಸಿದರು. ಸ್ಮಾರಕಗಳ ಸ್ವಚ್ಛತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ಪೀಟರ್ ಅಲೆಕ್ಸಾಂಡರ್ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದ್ದರು.