ವಿಜಯಪುರ : ನಗರದ ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಪಂದನಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ದೀಪಾವಳಿ ಹಬ್ಬದ ಹಿನ್ನೆಲೆ ಇತ್ತೀಚೆಗೆ ಕೊಳಚೆ ಪ್ರದೇಶದ ಬಡ ನಿವಾಸಿಗರಿಗೆ ಆಹಾರ ಹಾಗೂ ಬಟ್ಟೆಗಳನ್ನೊಳಗೊಂಡ ಕಿಟ್ಗಳನ್ನು ವಿತರಿಸಲಾಯಿತು.
ಸ್ಪಂದನ ಸ್ವಯಂ ಸೇವಾ ಸಂಸ್ಥೆ ಅಧ್ಯ ಮಹಾದೇವಪ್ಪ ದೇವರ, ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ನ ಅಧ್ಯ ಆಸಿಫ್ ಇಕ್ಬಾಲ್ ದೊಡ್ಡಮನಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ದುರ್ಬಲ ವರ್ಗಗಳನ್ನು ಮೇಲೆತ್ತುವ ಕೆಲಸ ಮಾಡಿದರೆ, ಖಂಡಿತ ನಮ್ಮ ಸಮಾಜವೇ ಅಭಿವೃದ್ಧಿಯತ್ತ ಸಾಗಲಿದೆ ಎಂದ ಅವರು, ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದ ಎಲ್ಲರಿಗೆ ಧನ್ಯವಾದ ಸಲ್ಲಿಸಿದರು.
ಸಂಸ್ಥೆ ಪದಾಧಿಕಾರಿಗಳಾದ ಪ್ರಶಾಂತ ದೇಶಪಾಂಡೆ, ಸುಮಾ ಚೌಧರಿ, ಬಂದೇನವಾಜ ಲೋಣಿ, ಶ್ರೀನಾಥ ಪಾಟೀಲ, ಸಚಿನ ಪಾಂಡೆ, ನಿಯಾಜ ಬಾಗವಾನ, ಜುನೈದ ಇನಾಮದಾರ, ರೋಹಿತ, ಶೋಯಿಬ ಜತ್ತ, ಸಮೀರ ಸಿಪಾಯಿ ಮತ್ತಿತರರಿದ್ದರು.