ಅಂಕೋಲಾ: ಶಿರೂರು ಗುಡ್ಡ ಕುಸಿತದ ಪರಿಣಾಮವಾಗಿ ಗಂಗಾವಳಿ ನದಿ ಉಕ್ಕಿ ಉಳುವರೆಯ ಸಣ್ಣು ಹನುಮಂತ ಗೌಡ ಕೊಚ್ಚಕೊಂಡು ಹೋಗಿದ್ದರು.
ಈ ದುರ್ಘಟನೆ ಸಂಭವಿಸಿ 8 ದಿನಗಳ ನಂತರ ಗೋಕರ್ಣ ಸಮೀಪದ ಗಂಗೆ ಕೊಳ್ಳದಲ್ಲಿ ಸಣ್ಣು ಗೌಡ ಅವರ ಮೃತದೇಹ ಪತ್ತೆಯಾಗಿತ್ತು. ಇದಾದ 24 ಗಂಟೆಯೊಳಗೆ ಸಣ್ಣು ಗೌಡಳ ಕುಟುಂಬಕ್ಕೆ ಶಾಸಕ ಸತೀಶ ಸೈಲ್ ಅವರು 5 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ಅನ್ನು ಮೃತಳ ಪುತ್ರ ಮಂಜುನಾಥ ಗೌಡನಿಗೆ ವಿತರಿಸಿ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಗುಡ್ಡ ಕುಸಿತ ದುರಂತದಲ್ಲಿ ಜಗನ್ನಾಥ ನಾಯ್ಕ ಕೂಡ ಒಬ್ಬರಾಗಿದ್ದು, ಅವರು ಈವರೆಗೂ ಪತ್ತೆಯಾಗಿಲ್ಲ. 3 ಹೆಣ್ಣು ಮಕ್ಕಳಿರುವ ಬಡ ಕುಟುಂಬದ ನಿರ್ವಹಣೆಗೆ ಆಧಾರವಾಗಲು ಬಿಕಾಂ ಪದವಿ ಪಡೆದಿರುವ ಹೆಣು ್ಣುಗಳೊಬ್ಬಳಿಗೆ ಮಾನವೀಯತೆ ಮತ್ತು ಅನುಕಂಪದಿಂದ ಸರ್ಕಾರದ ವತಿಯಿಂದ ಹೊರ ಗುತ್ತಿಗೆ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಡಿಸಿ ಲಕ್ಷ್ಮೀಪ್ರಿಯಾ, ಎಸ್ಪಿ ನಾರಾಯಣ ಎಂ., ಎಸಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಅನಂತ ಶಂಕರ ಬಿ., ಅಂಕೋಲಾ ಜಿಪಂ ಎಇಇ ರಾಮು ಗುನಗಿ ಇತರರಿದ್ದರು.