More

  ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ

  ಹುಬ್ಬಳ್ಳಿ: ಶ್ರೀ ಶಿವಂಚಿ ಓಸ್ವಾಲ್ ಜೈನ್ ಸಂಘದ ಆಶ್ರಯದಲ್ಲಿ 6 ರಿಂದ 18 ವರ್ಷದ ಮಕ್ಕಳಿಗಾಗಿ ಮೂರು ದಿನಗಳ ಮಿನಿ ಎಂಬಿಎ ಮತ್ತು ಸಾರ್ವಜನಿಕ ಭಾಷಣ ಕಾರ್ಯಾಗಾರವನ್ನು ನ. 17ರಿಂದ 19ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಗೋಕುಲ ರಸ್ತೆಯ ಉಷಾ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
  100 ಮಕ್ಕಳಿಗೆ ತರಬೇತಿ ನೀಡಲಾಯಿತು. ಸೂರತ್‌ನಿಂದ ಅನ್ಮೋಲ್ ರಾಂಕಾ ಮತ್ತು ನಿಕಿತಾ ರಾಂಕಾ ಅವರನ್ನು ತರಬೇತಿ ನೀಡಲು ಆಹ್ವಾನಿಸಲಾಗಿತ್ತು. ಸಂಘದಿಂದ ಮಕ್ಕಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
  ಶ್ರೀ ಶಿವಾಂಚಿ ಓಸ್ವಾಲ್ ಜೈನ್ ಸಂಘದ ಅಧ್ಯಕ್ಷ ಮಹಾವೀರ ಪಾಲ್ರೇಚಾ, ಉಪಾಧ್ಯಕ್ಷ ಪ್ರವೀಣ ಬಾಗ್ರೇಚಾ, ಕಾರ್ಯದರ್ಶಿ ಮನೀಶ ಮೆಹ್ತಾ, ಸಹ ಕಾರ್ಯದರ್ಶಿ ನರೇಶ ಮಂಡೋತ, ಕಾರ್ಯಕಾರಿ ಸದಸ್ಯರಾದ ಶಾಂತಿಲಾಲ್ ಓಸ್ತವಾಲ್, ರಾಜೇಶ ಬಂದಾಮೂತಾ, ಗೌತಮ ಬಾಗ್ರೇಚಾ, ಶಿವಂಚಿ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಬಾಫ್ನಾ, ಸುಮನ್ ಬಾಫ್ನಾ, ಯುವ ಮಂಡಲದ ಅಧ್ಯಕ್ಷ ಕಲ್ಪೇಶ ಕಂಕಾರಿಯಾ, ಕೇವಲ್ಚಂದ ರಾಂಕಾ, ಪ್ರದೀಪ ಚೋಪ್ರಾ, ಪಿಂಟು ಬಾಗ್ರೇಚಾ, ಜಿನೇಶ ಓಸ್ತವಾಲ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts