More

    ವಿಜೇತರಿಗೆ ಬೊಟ್ಟೋಳಂಡ ಕಪ್ ವಿತರಣೆ

    ಮಡಿಕೇರಿ: ಬೊಟ್ಟೋಳಂಡ ಮಿಟ್ಟು ಚೆಂಗಪ್ಪ ಹಾಗೂ ಬೊಟ್ಟೋಳಂಡ ವಾಸು ಮುತ್ತಪ್ಪರವರ ಪ್ರಾಯೋಜಕತ್ವದಲ್ಲಿ ಬೊಟ್ಟೋಳಂಡ ಕಪ್ ರೇಸ್ ಮೈಸೂರು ರೇಸ್ ಕೋರ್ಸ್‌ನಲ್ಲಿ ನಡೆಯಿತು.


    ವಿಜೇತರಿಗೆ ಮಿಟ್ಟು ಚೆಂಗಪ್ಪರವರ ಪುತ್ರಿ ಕೃತಿ ಪ್ರದೀಪ್ ಹಾಗೂ ಅಳಿಯ, ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್.ಪ್ರದೀಪ್‌ರವರು ಬೊಟ್ಟೋಳಂಡ ಕಪ್‌ನ್ನು ವಿತರಿಸಿದರು.


    ಮೈಸೂರು ರೇಸ್ ಕ್ಲಬ್‌ನ ಅಧ್ಯಕ್ಷ ಚಂದ್ರೇಗೌಡ, ಬೊಟ್ಟೋಳಂಡ ಅಪ್ಪಣ್ಣ, ಬೊಟ್ಟೋಳಂಡ ಪೊನ್ನಣ್ಣ, ಕವಿತಾ ಮುತ್ತಪ್ಪ, ಕ್ಲಬ್‌ನ ಉಸ್ತುವಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ತಮ್ಮ ಪ್ರಾಯೋಜಕತ್ವದಲ್ಲಿ ಕಳೆದ ೨೦ ವರ್ಷಗಳಿಂದ ರೇಸ್‌ನ್ನು ನಡೆಸಿಕೊಂಡು ಬರುತ್ತಿರುವುದಾಗಿ ಮಿಟ್ಟು ಚೆಂಗಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts