ನಗರದಲ್ಲಿ 4 ದಿನದಲ್ಲಿ ಐದು ಲಕ್ಷ ಮೂರ್ತಿಗಳ ವಿಸರ್ಜನೆ

ಬೆಂಗಳೂರು: ಈ ಬಾರಿ ನಗರದಲ್ಲಿ ಗಣೇಶ ಚತುರ್ಥಿ ಆಚರಣೆ ಹಿನ್ನೆಲೆಯಲ್ಲಿ ಗಣಪತಿ ಉತ್ಸವದ ಮೊದಲ 4 ದಿನಗಳಲ್ಲಿ ಬರೋಬರಿ ಐದು ಲಕ್ಷ ಮೂರ್ತಿಗಳನ್ನು ಪಾಲಿಕೆಯ ಕಲ್ಯಾಣಿಗಳಲ್ಲಿ ವಿಸರ್ಜಿಸಲಾಗಿದೆ.

ಗಣೇಶ ಚೌತಿಯಂದು 2.13 ಲಕ್ಷ ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು. ಎರಡನೇ ದಿನ 83 ಸಾವಿರ, ಮೂರನೇ ದಿನ 1.32 ಲಕ್ಷ ಹಾಗೂ ನಾಲ್ಕನೇ ದಿನವಾದ ಮಂಗಳವಾರ 18 ಸಾವಿರ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಇದೇ ಮೊದಲ ಬಾರಿಗೆ ಬಿಬಿಎಂಪಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಗಳ ಬಳಿ ಉತ್ತಮ ವ್ಯವಸ್ಥೆ ಮಾಡಲಾಗಿದೆ. ವಿವಿಧ ಗಣಪತಿ ಸಮಿತಿಗಳು ಮೆರವಣಿಗೆ ಮೂಲಕ ಹೊತ್ತುತರುವ ಮೂರ್ತಿಗಳನ್ನು ಕಲ್ಯಾಣಿ ಪ್ರವೇಶದ್ವಾರದಲ್ಲೇ ಇಳಿಸಿ ಪಾಲಿಕೆ ಸಿಬ್ಬಂದಿಗಳೇ ಅವುಗಳಣ್ನು ವಿಸರ್ಜಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನೀರು ಇರುವ ಜಾಗಕ್ಕೆ ಅನ್ಯರಿಗೆ ಪ್ರವೇಶ ನೀಡಲಾಗುತ್ತಿಲ್ಲ. ದೊಡ್ಡ ಮೂರ್ತಿಗಳನ್ನು ವಿಸರ್ಜಿಸಲು ಕ್ರೇನ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್, ಹೋಂ ಗಾಡ್ಸ್ ಸಿಬ್ಬಂದಿ ಜತೆಗೆ ದೊಡ್ಡ ಕೆರೆಗಳ ಕಲ್ಯಾಣಿ ಬಳಿ ಅಗ್ನಿಶಾಸಮಕ ವಾಹನದ ವ್ಯವಸ್ಥೆ ಮಾಡಿ ಎಲ್ಲ ರೀತಿಯ ಸುರಕ್ಷತೆಯನ್ನು ಕೈಗೊಂಡಿರುವುದು ನಾಗರಿಕರ ಮೆಚ್ಚುಗೆಗೆ ಕಾರಣವಾಗಿದೆ.

ಸಿಬ್ಬಂದಿಗಳಿಗೆ ಹೆಚ್ಚು ಕೆಲಸ:

ಪಾಲಿಕೆ ವ್ಯಾಪ್ತಿಯ 41 ಕೆರೆಗಳ ಬಳಿಯಿರುವ ಕಲ್ಯಾಣಗಳಲ್ಲಿ ತಲಾ 8ರಿಂದ 10 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ನುರಿತ ಈಜುಗಾರರು ಆಗಿದ್ದು, ಯಾವುದೇ ಅವಘಡ ಸಂಭವಿಸಿದ್ದಲ್ಲಿ ಜೀವ ಉಳಿಸುವ ಕೆಲಸವನ್ನು ಮಾಡಲು ಸಿದ್ಧರಿರುತ್ತಾರೆ. ಮೂರ್ತಿಗಳ ವಿಸರ್ಜನೆ ಇಲ್ಲದ ಸಮಯದಲ್ಲಿ ಕಲ್ಯಾಣಿಯಲ್ಲಿ ಬಿದ್ದ ತ್ಯಾಜ್ಯ ಹಾಗೂ ವಿಸರ್ಜಿಸಲಾದ ಮೂರ್ತಿಗಳ ಅವಶೇಷವನ್ನು ಹೊರಹಾಕುವ ಕೆಲಸವನ್ನು ವಹಿಸಲಾಗಿದೆ. ಯಡಿಯೂರು ಸೇರಿ ಕೆಲ ಕಲ್ಯಾಣಿಗಳಲ್ಲಿ ಈಗಾಗಲೇ ಮೂರ್ತಿಗಳಿಂದ ಭರ್ತಿಯಾಗಿದೆ. ತ್ಯಾಜ್ಯ ವಿಲೇಗೆ ಹರಸಾಹಸಪಡುತ್ತಿರುವ ಸಿಬ್ಬಂದಿ ಜತೆಗೆ ಹೆಚ್ಚುವರಿ ಮಂದಿಯನ್ನು ನಿಯೋಜಿಸಲು ಪಾಲಿಕೆ ಚಿಂತನೆ ನಡೆಸಿದೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಣೇಶ ಮೂರ್ತಿಗಳ ವಿಸರ್ಜನೆ ವಿವರ (ಸೆ.9ರಂದು):

ವಲಯ ಮೂರ್ತಿಗಳ ಸಂಖ್ಯೆ
ಪೂರ್ವ 29,586
ಪಶ್ಚಿಮ 15,516
ದಕ್ಷಿಣ 62,246
ಬೊಮ್ಮನಹಳ್ಳಿ 3,790
ದಾಸರಹಳ್ಳಿ 668
ಮಹದೇವಪುರ 4,899
ಆರ್.ಆರ್.ನಗರ 6,716
ಯಲಹಂಕ 8,732
ಒಟ್ಟು ಮೂರ್ತಿಗಳು 1,32,153

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…