ವೈಟ್​ಟಾಪಿಂಗ್ ​ಕಾಮಗಾರಿಗೆ ಅಡ್ಡಿ

ಬೆಂಗಳೂರು: ವಿಲ್ಸನ್ ಗಾರ್ಡನ್​ನ ಬಿಟಿಎಸ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್​ಟಾಪಿಂಗ್ ಕಾಮಗಾರಿಗೆ ಜಲಮಂಡಳಿ ಕಾಮಗಾರಿಯಿಂದ ಅಡ್ಡಿ ಉಂಟಾಗುತ್ತಿದ್ದು, ವಾರದೊಳಗಾಗಿ ಸರಿಪಡಿಸುವಂತೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ. ಇಲ್ಲದಿದ್ದರೆ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದಾರೆ.

ವಿಲ್ಸನ್ ಗಾರ್ಡನ್​ನಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಹಂತಹಂತವಾಗಿ ನಡೆಸಲು ಸಂಚಾರ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ, ಜಲಮಂಡಳಿ ಕೈಗೆತ್ತಿಕೊಂಡಿರುವ ಕಾಮಗಾರಿ ಹಾಗೂ ಕಿರಿದಾದ ರಸ್ತೆಗಳ ಡಾಂಬರೀಕರಣದಿಂದ ವೈಟ್​ಟಾಪಿಂಗ್​ಗೆ ಅಡೆತಡೆ ಉಂಟಾಗುತ್ತಿದೆ ಎಂದು ತಿಳಿಸಿದರು.

ಕೆಲ ರಸ್ತೆಗಳಲ್ಲಿನ ಒಳಚರಂಡಿಗಳಲ್ಲಿ ಹೂಳು ತುಂಬಿರುವ ಕಾರಣ ನೀರು ಸರಾಗವಾಗಿ ಹರಿಯದೆ ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತಿದೆ. ಜತೆಗೆ ರಾಜಕಾಲುವೆ ತಡೆಗೋಡೆ ಬಿದ್ದಿದ್ದು, ಮಳೆ ಬಂದರೆ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುವ ಆತಂಕವಿರುವುದರಿಂದ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಗಂಗಾಂಬಿಕೆ ತಿಳಿಸಿದರು.

Leave a Reply

Your email address will not be published. Required fields are marked *