ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​: ವಿಚಾರಣೆ ಮುಂದೂಡಿದ ಬೆನ್ನಲ್ಲೇ ವಿಧಾನಸಭಾ ಕಾರ್ಯಾಲಯದಿಂದ ಪತ್ರದ ಬಿಸಿ!

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​ ಎದುರಾಗಿದೆ. ಮಂಗಳವಾರ ಬೆಳಗ್ಗೆ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್​ ವಿಚಾರಣೆಯನ್ನು ಮುಂದೂಡಿದೆ. ಇದರ ಬೆನ್ನಲ್ಲೇ ರಾಜ್ಯದ ವಿಧಾನಸಭಾ ಕಾರ್ಯಾಲಯ ಅನರ್ಹರಿಗೆ ಮತ್ತೊಂದು ಶಾಕ್​ ನೀಡಿದೆ.

ಮಂಗಳವಾರ ಬೆಳಗ್ಗೆ ನ್ಯಾ.ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಆದರೆ, ವಿಚಾರಣೆಯಿಂದ ಕರ್ನಾಟಕ ಮೂಲದ ನ್ಯಾ. ಮೋಹನ್​ ಶಾಂತನಗೌಡರ್ ಅವರು ಹಿಂದೆ ಸರಿದಿರುವುದರಿಂದ ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದು, ಅನರ್ಹ ಶಾಸಕರಿಗೆ ಟೆನ್ಶನ್​ ಮುಂದುರಿದಿದೆ.

ಇದರ ಬೆನ್ನಲ್ಲೇ ಕೊನೆಯ ವಾರವಷ್ಟೇ ಪತ್ರ ಬರೆದಿದ್ದ ವಿಧಾನಸಭಾ ಕಾರ್ಯಾಲಯ ಇದೀಗ ಮತ್ತೊಂದು ಪತ್ರವನ್ನು ರಾಜ್ಯಪಾಲರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಜುಲೈ 25ಕ್ಕೆ ಶಾಸಕರು ಅನರ್ಹಗೊಂಡಿದ್ದು, ಜನವರಿ 25ರ ಒಳಗೆ ಆ ಸ್ಥಾನಗಳನ್ನು ತುಂಬಬೇಕು. ಹೀಗಾಗಿ ಚುನಾವಣಾ ನೋಟಿಫಿಕೇಷನ್ ಹೊರಡಿಸುವಂತೆ ಸಲಹಾ ಪತ್ರ ನೀಡಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *