More

  ಆಟೋರಿಕ್ಷಾ ವಾಹನಗಳಿಗೆ ಡಿಸ್‌ಪ್ಲೇ ಕಾರ್ಡ್ ಕಡ್ಡಾಯ

  ತುಮಕೂರು: ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕಲು ಮತ್ತೊಮ್ಮೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಿಂದೆ ನೀಡಲಾಗಿದ್ದ ತುಮಕೂರು ಟ್ರಾಫಿಕ್ ಪೊಲೀಸ್ (ಟಿಟಿಪಿ) ಸಂಖ್ಯೆ ನೋಂದಣಿ ಕೈಬಿಟ್ಟು ಹೊಸದಾಗಿ ಮತ್ತೆ ಡಿಸ್‌ಪ್ಲೇ ಕಾರ್ಡ್ ಪದ್ಧತಿ ಜಾರಿ ತರಲಾಗಿದೆ.

  ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಸೋಮವಾರ ನಗರದಲ್ಲಿ ಸಂಚರಿಸುವ ಆಟೋರಿಕ್ಷಾ ವಾಹನಗಳಿಗೆ ವಾಹನ, ಮಾಲೀಕರು ಹಾಗೂ ಚಾಲಕರ ಮಾಹಿತಿಯ ವಿವರವುಳ್ಳ ಡಿಸ್‌ಪ್ಲೇ ಕಾರ್ಡ್ ಅನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನೋಂದಾಯಿತ ಆಟೋ ಚಾಲಕರಿಗೆ ವಿತರಿಸಲಾಯಿತು. ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಚಾಲಕರಿಗೆ ಡಿಸ್‌ಪ್ಲೇ ಕಾರ್ಡ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ಫೆ.15ರೊಳಗೆ ಡಿಸ್‌ಪ್ಲೇ ಕಾರ್ಡ್ ಕಡ್ಡಾಯ: ನಗರದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ ಆಟೋರಿಕ್ಷಾಗಳಿಗೆ ಫೆ.15ರೊಳಗೆ ಕಡ್ಡಾಯವಾಗಿ ಡಿಸ್‌ಪ್ಲೇ ಕಾರ್ಡ್ ಅಳವಡಿಸಿಕೊಳ್ಳುವಂತೆ ಎಸ್ಪಿ ಡಾ.ಕೆ.ವಂಶಿಕೃಷ್ಣ ಸೂಚನೆ ನೀಡಿದರು. ಆಟೋರಿಕ್ಷಾ ಚಾಲಕರು ವಾಹನದ ಎಲ್ಲ ದಾಖಲಾತಿಗಳನ್ನು ಸುರಕ್ಷಿತವಾಗಿ ನಿರ್ವಹಣೆ ಮಾಡಬೇಕು. ಸುರಕ್ಷಿತ ಪ್ರಯಾಣದ ಚಾಲನೆ ಮೂಲಕ ಪ್ರಯಾಣಿಕರ, ಜನರಿಗೆ ಉತ್ತಮ ಸೇವೆ ನೀಡಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಮಾಹಿತಿಯನ್ನು ಪೊಲೀಸ್ ಇಲಾಖೆ ಜತೆ ಆಟೋ ಚಾಲಕರು ಹಂಚಿಕೊಳ್ಳುವಂತೆ ಸಹ ತಿಳಿಸಿದರು. ಎಎಸ್ಪಿ ಟಿ.ಜೆ.ಉದೇಶ್, ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ಇದ್ದರು.

  1013 ಡಿಸ್‌ಪ್ಲೇ ಕಾರ್ಡ್ ವಿತರಣೆ : ಕ್ಯೂಆರ್ ಕೋಡ್‌ವುಳ್ಳ ಡಿಸ್‌ಪ್ಲೇ ಕಾರ್ಡ್‌ನಲ್ಲಿ ಚಾಲಕರ, ಮಾಲೀಕರ ವಿವರ ಇರಲಿದೆ. ಚಾಲಕರ  ಮಾಹಿತಿ ಇರಲಿದೆ. ಶಿವಮೊಗ್ಗದ ವೆಬ್‌ಸ್ಕೆಟಿಯೊ ಈ ಡಿಸ್‌ಪ್ಲೇ ಕಾರ್ಡ್ ರೂಪಿಸಿದೆ. ಇದರ ಜತೆಗೆ ಆಟೋ ಸ್ನೇಹಿತ ಆ್ಯಪ್ ಕೂಡ ಅಭಿವೃದ್ಧಿ ಪಡಿಸುತ್ತಿದ್ದು ನಗರದಲ್ಲಿ ಸಂಚರಿಸುವ ಅಧಿಕೃತ ಆಟೋಗಳ ವಿವರಣೆಗಳು ಇದರಲ್ಲಿ ಲಭ್ಯವಾಗಲಿದೆ. ಮೊದಲ ದಿನ 1013 ಡಿಸ್‌ಪ್ಲೇ ಕಾರ್ಡ್ ವಿತರಿಸಲಾಯಿತು.

  ಆಟೋ ಚಾಲಕರು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆಯ ನಿಯಮಗಳು ಹಾಗೂ ಸುಪ್ರಿಂಕೋರ್ಟ್ ಆದೇಶಗಳನ್ನು ಪಾಲಿಸದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಆಟೋಗಳ ಸಂಚಾರಕ್ಕು ಕಡಿವಾಣ ಬೀಳಲಿದೆ.
  ವಂಶಿಕೃಷ್ಣ ಪೊಲೀಸ್ ವರಿಷ್ಠಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts