ಧಾರವಾಡ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಧಾರವಾಡದ ದಕ್ಷಿಣ ಭಾರತ ಕ್ರೖೆಸ್ತ ಮಹಾಸಭೆಯ ಕರ್ನಾಟಕ ಉತ್ತರ ಸಭಾಪ್ರಾಂತ ವ್ಯಾಪ್ತಿಯ 120 ಚರ್ಚ್ಗಳಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಮಂಗಳವಾರ ಕಳುಹಿಸಲಾಯಿತು.
ಸಾಮಗ್ರಿಗಳಿದ್ದ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ ಸಭಾಪ್ರಾಂತದ ಕಾರ್ಯದರ್ಶಿ ವಿಜಯಕುಮಾರ್ ದಂಡಿನ್ ಮಾತನಾಡಿ, ನೋವಿನಲ್ಲಿರುವ ಜನರಿಗೆ ಸ್ಪಂದಿಸುವುದು ನಮ್ಮ ಧರ್ಮ. ನೊಂದವರ ಕಣ್ಣೀರು ಒರೆಸುವುದು ಮಾನವೀಯತೆ ಎಂದು ಸಾರಲು ಕೈಲಾದ ಸಹಾಯ ಮಾಡಿದ್ದೇವೆ ಎಂದರು.
ಸಭಾಪ್ರಾಂತ ವ್ಯಾಪ್ತಿಯ 120 ಚರ್ಚ್ಗಳಿಂದ ಸಂಗ್ರಹಿಸಿದ ಸುಮಾರು 200 ಚೀಲ ಅಕ್ಕಿ, 150 ಆಹಾರದ ಕಿಟ್ಗಳು, 200 ಲೀ. ಅಡುಗೆ ಎಣ್ಣೆ, ಸೋಪು, ಮಕ್ಕಳು, ಮಹಿಳೆಯರ ಉಡುಪುಗಳು, ಮಸಾಲ ಸಾಮಾಗ್ರಿಗಳು, ಔಷಧ, ಪಾತ್ರೆಗಳು, ಚಾಪೆಗಳನ್ನು ಟ್ರಕ್ನಲ್ಲಿ ಕಳುಹಿಸಲಾಯಿತು.
ವಿಲ್ಸನ್ ಜೆ. ಮೈಲಿ, ಫಾದರ್ ಸುನಿಲ್ಕುಮಾರ್, ಫಾದರ್ ಸುರೇಶ ನಾಯ್ಕರ್, ಫಾದರ್ ಆಲ್ಬರ್ಟ್ ಸೋನ್ಸ್, ಡೆರಿಕ್ ಕ್ರಿಸ್ಟೋಫರ್, ಫಾದರ್ ವಿಜಯ ನಾಯ್ಕರ್ ಹಾಗೂ ವಿಲ್ಸನ್ ಗುಡಸಲಮನಿ, ಇತರಿದ್ದರು.