ಮಡಿಕೇರಿ
ಕೊಡಗಿನಲ್ಲಿ ಹಿರಿಯ ಅಧಿಕಾರಿಗಳ ಸರ್ವಾಧಿಕಾರ ಮಿತಿ ಮೀರಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಸಮರ್ಥರಾಗಿದ್ದಾರೆ ಎಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ. 1947ಕ್ಕಿಂತ ಮೊದಲು ನಾವು ಆಂಗ್ಲರ ಗುಲಾಮರಾಗಿದ್ದೆವು. ಆದರೆ ಈಗ ಅಧಿಕಾರಿಗಳ ಗುಲಾಮರಾಗಿ ಇರುವಂಥ ಅನಿವಾರ್ಯತೆ ನಿರ್ಮಾಣ ಆಗಿದೆ. ಪ್ರಜೆಗಳೇ ಪ್ರಭುಗಳು ಎನ್ನುವ ಪ್ರಜಾಫ್ರಭುತ್ವದಲ್ಲಿ ನಾವು ಇದ್ದರೂ ಪ್ರಭುತ್ವದ ಬಲವೇ ಜನಸಾಮಾನ್ಯರಿಗೆ ಇಲ್ಲದಂತಾಗಿದೆ ಎಂದು ಸಮಿತಿಯ ಅಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಕೇಂದ್ರ ಮಡಿಕೇರಿ, ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ವಾರದ ಸಂತೆ ದಿನಗಳಂದು ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದರೆ ಜನಸಾಮಾನ್ಯರಿಗೆ ಅನುಕೂಲ ಆಗುತ್ತದೆ. ಆದರೆ ಹಿರಿಯ ಅಧಿಕಾರಿಗಳು ಇರುತ್ತಾರೆ ಎನ್ನುವ ನಂಬಿಕೆಯಿAದ ಬಂದರೆ ಜಿಲ್ಲಾಧಿಕಾರಿ, ಎಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಬಹುತೇಕ ಸಂದರ್ಭಗಳಲ್ಲಿ ಇರುವುದೇ ಇಲ್ಲ. ಈ ವಿಷಯವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಸಂತೆಯ ದಿನಗಳಂದು ಹಿರಿಯ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾದರೆ ಉತ್ತಮ ಎಂದರು.
ವಿರಾಜಪೇಟೆ ತಹಸೀಲ್ದಾರ್ ಕಾರ್ಯನಿರ್ಲಕ್ಷö್ಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಆ.21ರಂದು ಕೆಲಸವೊಂದರ ನಿಮಿತ್ತ ತಹಸೀಲ್ದಾರ್ ಅವರ ಸಮಯಾವಕಾಶ ಮುಂಚಿತವಾಗಿ ಪಡೆದುಕೊಂಡೇ ಅವರ ಭೇಟಿಗೆ ತೆರಳಿದರೆ ವಿರಾಜಪೇಟೆ ಸಂತೆಯ ದಿನವಾದ ಬುಧವಾರವೂ ಅವರು ಕೇಂದ್ರ ಸ್ಥಾನದಲ್ಲಿ ಇರಲಿಲ್ಲ. 11 ಗಂಟೆಗೆ ಕಚೇರಿಯಲ್ಲಿ ಇರುತ್ತೇನೆ ಎಂದು ಮಾಹಿತಿ ನೀಡಿದ್ದ ತಹಸೀಲ್ದಾರ್ 12 ಗಂಟೆ ಆದರೂ ಭೇಟಿಗೆ ಸಿಗಲಿಲ್ಲ. ಕರೆ ಮಾಡಿದರೆ ಡಿಸಿ ಕಚೇರಿಯಲ್ಲಿ ಇರುವುದಾಗಿ ಮಾಹಿತಿ ನೀಡಿದರು. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ, ದೂರದ ಶ್ರೀಮಂಗಲದಿAದ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಂಡು ಅಗತ್ಯ ಬೀಳುತ್ತಿರಲಿಲ್ಲ. ವಿರಾಜಪೇಟೆ ತಹಸೀಲ್ದಾರ್ ವರ್ತನೆಯಿಂದ ನಮ್ಮಂಥ ಹಿರಿಯ ನಾಗರಿಕರಿಗೆ ಅವಮಾನವಾಗಿದೆ ಎಂದು ನೋವು ತೋಡಿಕೊಂಡರು.
ಇದೇ ವೇಳೆ ಮಾತನಾಡಿದ ಸಮಿತಿಯ ಕಾನೂನ ಸಲಹೆಗಾರ ಸಿ.ಎನ್. ಬೋಸ್ ವಿಶ್ವನಾಥ್, ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ದರವಿದ್ದರೂ ಕಾಫಿ ವ್ಯಾಪಾರಿಗಳು, ಮಧ್ಯವರ್ತಿಗಳು ಶೇ. 75ರಷ್ಟು ದರವನ್ನು ಮಾತ್ರ ಬೆಳೆಗಾರರಿಗೆ ಕೊಡುತ್ತಿದ್ದಾರೆ. ತೂಕ, ಚೀಲದ ಲೆಕ್ಕ ಹಾಗೂ ಔಟ್‌ರನ್ ಹೆಸರಿನಲ್ಲೂ ವಂಚನೆ ಮಾಡಲಾಗುತ್ತಿದೆ. ಕಾಫಿ ಮುಕ್ತ ಮಾರುಕಟ್ಟೆ ಆದ ನಂತರ ಬೆಳೆಗಾರರಿಗೆ ಅನುಕೂಲ ಆಗಿದ್ದರೂ ಮಧ್ಯವರ್ತಿಗಳಿಂದ ಅನ್ಯಾಯ ಆಗುತ್ತಿದೆ. ಕಳೆದ ವರ್ಷ ಮಳೆ ಕೊರತೆ ಮತ್ತು ಈ ವರ್ಷ ಅತಿಯಾದ ಮಳೆಯಿಂದ ಕಾಫಿ ನಷ್ಟವಾಗಿದೆ. ಆದರೆ ಕಾಫಿ ಮಂಡಳಿಯಿAದ ಸರಿಯಾದ ಸಮೀಕ್ಷೆ ನಡೆದಿಲ್ಲ. ಇದರಿಂದಾಗಿ ಬೆಳೆಗಾರರಿಗೆ ಸಿಗುವ ಪರಿಹಾರದಲ್ಲಿ ವ್ಯತ್ಯಾಸ ಆಗಲಿದೆ. ಬೆಳೆಗಾರರ ಶ್ರಮಕ್ಕೆ ಸರಿಯಾದ ಫಲ ಸಿಗುತ್ತಿಲ್ಲ. 25 ವರ್ಷಗಳ ಹಿಂದೆ ಆರಂಭವಾದ ಕಾಫಿ ಬೆಳೆಗಾರರ ಒಕ್ಕೂಟವೂ ಬೆಳೆಗಾರರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಡಗಿನಲ್ಲಿ ಕಾಫಿ ಬೆಳೆಯ ಅವನತಿ ಆಗಬಹುದು. ಈ ಹಿನ್ನೆಲೆಯಲ್ಲಿ ಕಾಫಿ ಮಂಡಳಿ ಅಂತಾರಾಷ್ಟಿçÃಯ ಮಾರುಕಟ್ಟೆ ದರ ಬೆಳೆಗಾರರಿಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು. ದೈನಂದಿನ ಮಾರುಕಟ್ಟೆ ದರದ ಮಾಹಿತಿ ನಿಖರವಾಗಿ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಉಪಾಧ್ಯಕ್ಷ ಎಸ್.ಎ. ರತನ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಎ.ಎ. ಸತೀಶ್ ದೇವಯ್ಯ ಹಾಗೂ ಉಪಕಾರ್ಯದರ್ಶಿ ಕೆ.ಎಸ್. ರಾಜಾ ನರೇಂದ್ರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ
You Might Also Like
ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person
ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…
ಈ ಸಲಹೆಗಳನ್ನು ಪಾಲಿಸಿದ್ರೆ..ಮಾತ್ರೆ ನುಂಗದೆ ಕ್ಷಣ ಮಾತ್ರದಲ್ಲೇ ತಲೆ ನೋವು ಮಾಯ! Headache Health Tips
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ತಲೆನೋವು ( Headache Health Tips ) ಸಾಮಾನ್ಯವಾಗಿದೆ. ಈ…
ಪೇರಲೆ ಹಣ್ಣಿನಲ್ಲಿ ಮಾತ್ರವಲ್ಲ ಎಲೆಗಳಲ್ಲೂ ಇದೆ ಔಷಧೀಯ ಗುಣ; ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಜಗಿದ್ರೆ ಸಾಕು.. Guava Leaves Benefits
ಬೆಂಗಳೂರು: ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ…