ರೋಗಕ್ಕೆ ಹೊಂಡದ ನೀರೇ ಮದ್ದು!

blank

| ಅಮೋಘ ಡಿ.ಎಂ. ಗೋಕಾಕ

ಸಾಮಾನ್ಯವಾಗಿ ಮನುಷ್ಯ ಕಾಯಿಲೆ ಬಿದ್ದಾಗ ಆಸ್ಪತ್ರೆಗಳಿಗೋ, ನಾಟಿ ವೈದ್ಯರ ಬಳಿಯೋ ಹೋಗಿ ಚಿಕಿತ್ಸೆ ಪಡೆಯುವುದು ಸಾಮಾನ್ಯ. ಆದರೆ, ಮೂಡಲಗಿ ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ಸ್ಥಳೀಯರು ಎಲ್ಲ ರೋಗ ನಿವಾರಣೆಗೂ ಹೊಂಡದ ನೀರನ್ನೇ ಅವಲಂಬಿಸಿದ್ದಾರೆ. ನಂಬಲು ಕಷ್ಟವಾದರೂ ಇದು ಸತ್ಯ ಸಂಗತಿ.

ಪಾಂಡವರಿಂದ ನಿರ್ಮಿತ ದೇವಸ್ಥಾನ: ಭೈರನಟ್ಟಿ ಗ್ರಾಮದಲ್ಲಿರುವ ಈಶ್ವರ ದೇವಸ್ಥಾನದ ಎದುರು ಇರುವ ಹೊಂಡ ಪಾಂಡವರಿಂದ ನಿರ್ಮಾಣವಾಗಿದೆ ಎಂಬ ನಂಬಿಕೆ ಜನರಲ್ಲಿದೆ. ದೇವಸ್ಥಾನದ ಎದುರು ಇರುವ ಹೊಂಡ ರಾಮನ ಬಾಣದಿಂದ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ಮೂರೇ ಮೂರು ಕಲ್ಲಿನ ಗೋಡೆಯಿಂದ ದೇವಸ್ಥಾನ ನಿರ್ಮಾಣವಾಗಿದೆ.

ಒಂದೇ ಒಂದು ಚಿಪ್ಪು ಕಲ್ಲಿಲ್ಲ, ಚೂರೇ ಚೂರು ಸಿಮೆಂಟೂ ಬಳಸಿಲ್ಲ. ಎಲ್ಲೂ ಮರಳು ಬಳಿಸಿದ ಕುರುಹಗಳೇ ಇಲ್ಲ. ಆದರೂ ಶತಶತಮಾನಗಳಿಂದ ಅಲುಗಾಡದೆ ನಿಂತಿರುವ ದೇವಸ್ಥಾನದ ಎದುರು ಇರುವ ನೀರಿನ ಹೊಂಡ ಜನರ ಅತ್ಯಂತ ನಂಬಿಕೆಯ ಜಾಗವಾಗಿದೆ.

ವನವಾಸಕ್ಕೆ ಹೊರಟ್ಟಿದ್ದ ರಾಮನಿಗೆ ದಾರಿ ಮಧ್ಯೆ ದೇವಸ್ಥಾನ ಕಂಡಿದೆ. ದೇವಸ್ಥಾನದ ಬಳಿ ಬಂದು ಪೂಜೆಗೆ ನೀರಿಲ್ಲದ ವೇಳೆ ರಾಮನೇ ಬಿಲ್ಲಿನಿಂದ ಬಾಣ ಹೊಡೆದಾಗ ಹೊಂಡ ಸೃಷ್ಟಿಯಾಯಿತು ಎನ್ನುವುದು ಜನರ ಅಭಿಪ್ರಾಯ. ರಾಮನಿಂದಲೇ ನಿರ್ಮಾಣವಾಗಿದ್ದಕ್ಕೆ ಹೊಂಡಕ್ಕೆ ರಾಮನ ಹೊಂಡ, ರಾಮತೀರ್ಥವೆಂದೇ ಹೆಸರು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಆವರಣ ಬಿಟ್ಟು ಕದಲದ ನೀರು!: ನಿರಂತರವಾಗಿ ಹರಿಯುವ ನೀರು ದೇವಸ್ಥಾನದ ಆವರಣದಿಂದ ಹೊರಗೆ ಹೋಗುವುದಿಲ್ಲ. ಬದಲಾಗಿ ದೇವಸ್ಥಾನದ ಆವರಣದಲ್ಲಿ ಇಂಗುತ್ತದೆ. ಇದರಿಂದ ಆವರಣದಲ್ಲಿ ಸವುಳು-ಜವುಳು ಸಮಸ್ಯೆಯೂ ಆಗಿಲ್ಲ. ಜ್ವರ ಬಂದರೆ ಸ್ನಾನ ಮಾಡಬೇಡಿ ಎಂದು ವೈದ್ಯರು ಹೇಳುತ್ತಾರೆ. ಆದರೆ ಇಲ್ಲಿನ ಜನರು ಇಲ್ಲಿ ಬಂದು ಸ್ನಾನ ಮಾಡಿದರೆ ಸಾಕು ಜ್ವರ ಮಾಯವಾಗುತ್ತದೆ ಎನ್ನುತ್ತಾರೆ. ಆದರೆ ಈ ಊರಿನಲ್ಲಿ ಸರ್ವ ರೋಗಕ್ಕೂ ಹೊಂಡದ ನೀರೇ ಮದ್ದು ಎಂಬುದು ಜನರ ಅಂಬೋಣ. ಇದು ವಿಜ್ಞಾನಕ್ಕೊಂದು ಸವಾಲೇ ಸರಿ ಎನ್ನುವುದು ಬಲ್ಲವರ ಅಭಿಪ್ರಾಯ.

ಶ್ರೀರಾಮಚಂದ್ರ ಸೀತಾಮಾತೆಯೊಂದಿಗೆ ಭೈರನಟ್ಟಿಗೆ ಭೇಟಿ ನೀಡಿದ ಬಗ್ಗೆ ಹಿರಿಯರು ಹೇಳುತ್ತಾರೆ. ಹೊಂಡದ ನೀರಿನಲ್ಲಿ ಸ್ನಾನ ಮಾಡಿದರೆ ಹಲವು ರೋಗಗಳು ಗುಣವಾದ ಬಗ್ಗೆಯೂ ಹೇಳುತ್ತಾರೆ. ಬಹಳಷ್ಟು ಜನ ತಮ್ಮ ಇಷ್ಟಾರ್ಥ ಪೂರೈಕೆಗಾಗಿ ಈಶ್ವರ ದೇವರಿಗೆ ಬೇಡಿಕೊಂಡು ಹರಕೆ ತೀರಿಸುತ್ತಾರೆ.
| ಕಲ್ಲನಗೌಡ ಲಕ್ಕಾರ ಹಿರಿಯ ಮುಖಂಡ, ಭೈರನಟ್ಟಿ

ನಮ್ಮ ತಾಯಿ ಗಂಡು ಮಗುವಿಗಾಗಿ ಹರಕೆ ಹೊತ್ತಿದ್ದಳು. ಹರಕೆ ತೀರಿಸುವುದನ್ನು ನಾವು ಮರೆತಿದ್ದೆವು. ನಂತರ ನಮ್ಮ ಅಣ್ಣನ ಮದುವೆ ಸಂದರ್ಭದಲ್ಲಿ ದೇವರು ಕನಸಿನಲ್ಲಿ ಬಂದು ಹರಕೆ ತೀರಿಸದಿರುವುದನ್ನು ನೆನಪಿಸಿದ. ನಂತರ ನಾವು ಹರಕೆ ತೀರಿಸಿದೆವು. ದೇವಸ್ಥಾನದ ಬಗ್ಗೆ ಸುತ್ತಲಿನ ಹಳ್ಳಿಗಳಲ್ಲಿ ಅಪಾರ ಭಕ್ತಿ, ನಂಬಿಕೆ ಇದೆ.
| ಶಿವನಗೌಡ ಪಾಟೀಲ ಗ್ರಾಪಂ ಮಾಜಿ ಅಧ್ಯಕ್ಷ, ಕಳ್ಳಿಗುದ್ದಿ

Share This Article

ಜಿಮ್​ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis

Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…