More

  ದ್ವೇಷದ ರಾಜಕಾರಣ ತಿರಸ್ಕಾರ: ರಮೇಶ್

  ಶಿವಮೊಗ್ಗ: ಬಿಜೆಪಿಯ ದ್ವೇಷದ ರಾಜಕಾರಣವನ್ನು ಜನರು ತಿರಸ್ಕರಿಸಿರುವುದು, ರಾಹುಲ್ ಗಾಂಧಿ ಅವರ ಪ್ರೀತಿಯ ರಾಜಕಾರಣ ಬೆಂಬಲಿಸಿರುವುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ನಿದರ್ಶನ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

  ಎನ್‌ಡಿಎ ಪರವಾದ ಸಮೀಕ್ಷೆಗಳು ಸುಳ್ಳಾಗಿದ್ದು, ಸಮೀಕ್ಷೆಗಳು ಬಿಜೆಪಿ ಪ್ರಾಯೋಜಕತ್ವ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ತಾತ್ವಿಕವಾಗಿ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಿಜೆಪಿಗೆ ಸ್ಪಷ್ಟ ಹಿನ್ನಡೆಯಾಗಿರುವುದು ಫಲಿತಾಂಶದಿಂದ ದೃಢಪಟ್ಟಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ 4,800 ಕಿ.ಮೀ. ಪಾದಯಾತ್ರೆ ಮಾಡಿ ಜನರ ಪ್ರೀತಿ ಗಳಿಸಿದ್ದಾರೆ. ಧರ್ಮ, ಜಾತಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣವನ್ನು ವಿರೋಧಿಸುವ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದರು ಎಂದರು.
  ಕಾಂಗ್ರೆಸ್ ಮುಖಂಡ ಶಿಕಾರಿಪುರದ ನಾಗರಾಜ ಗೌಡ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನರು ಕಾಂಗ್ರೆಸ್‌ಗೆ ಉತ್ತಮವಾಗಿ ಮತಗಳನ್ನು ನೀಡಿದ್ದಾರೆ. ಎಲ್ಲರೂ ಪ್ರಾಮಾಣಿಕವಾಗಿ, ಕಠಿಣ ಕೆಲಸ ಮಾಡಿದರೂ ಅಂದುಕೊಂಡ ಫಲಿತಾಂಶ ಸಿಗಲಿಲ್ಲ ಎಂದರು.

  See also  ಪ್ರತಿಷ್ಠೆ ಕಣದಲ್ಲಿ ಎಚ್​ಡಿಕೆಗೆ ಸಿಕ್ಕಿದ್ದು ಮಂಡ್ಯ ಸಕ್ಕರೆ : 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts