ಅಭಿವೃದ್ಧಿಗಾಗಿ ಪಶ್ಚಿಮ ಘಟ್ಟ ನಾಶ ಬೇಡ

UDP-3-11-Samvaadha

ಡಾ.ಉದಯ ಶಂಕರ್​ ಆತಂಕ | ಪಾಕೃತಿಕ ದುರಂತಗಳ ಸಂವಾದ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಮೇಲೆ ಹೆಚ್ಚುತ್ತಿರುವ ಯಂತ್ರಗಳ ದಾಳಿಯಿಂದಾಗಿ ಕೆಲವು ವರ್ಷಗಳಿಂದ ತಪ್ಪಲು ಪ್ರೇಶಗಳಲ್ಲಿ ಭೂಕುಸಿತ ದುರಂತ ಸಂಭವಿಸುತ್ತಲೇ ಇವೆ ಎಂದು ಮಣಿಪಾಲದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ.ಉದಯ ಶಂಕರ್​ ಆತಂಕ ವ್ಯಕ್ತಪಡಿಸಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿ ಶನಿವಾರ ಆಯೋಜಿಸಿದ್ದ ಕೃತಕ ನೆರೆ ಹಾವಳಿ, ಬೆಂಕಿ ದುರಂತ, ಭೂಕುಸಿತ: ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮರಗಳ ನಾಶ

ಅತ್ಯಂತ ಹೆಚ್ಚು ಮಳೆ ಬೀಳುವ, ಎತ್ತರ ಪ್ರದೇಶವೂ ಆಗಿರುವ ಪಶ್ಚಿಮ ಘಟ್ಟಗಳಲ್ಲಿ ಮರಗಳ ನಾಶದಿಂದಾಗಿ ಮಳೆ ನೀರು ಭೂಮಿಯ ಒಳಗೆ ತುಂಬ ಸುಲಭವಾಗಿ ಪ್ರವೇಶಿಸುತ್ತಿದೆ. ಹೇರಳವಾಗಿ ಒಳಗಡೆ ಹೋದ ಈ ನೀರು ಹೊರಗೆ ಬರಲೇ ಬೇಕು. ಆ ಜಾಗದಲ್ಲಿ ಪ್ರಚೋದನೆಯಾದರೆ ಭೂಕಂಪ ಆಗುವ ಸಾಧ್ಯತೆಯೂ ಜಾಸ್ತಿ. ಇತ್ತೀಚೆಗೆ ಮಳೆಗಾಲದಲ್ಲಿ ಪಶ್ಚಿಮ ಘಟ್ಟದಲ್ಲಿ ಕೇಳುತ್ತಿರುವ ಸ್ಫೋಟಗಳ ಶಬ್ದವೇ ಸ್ತರಭಂಗ ಆಗಿದೆ. ಅದಕ್ಕೆ ನೇರವಾಗಿ ಬೀಳುವ ಅಂತರ್ಜಲವೂ ಒತ್ತಡ ಕೊಡುತ್ತದೆ. ಅಂತಹ ಸಂದರ್ಭದಲ್ಲಿ ಪ್ರಸ್ತುತ ಕೇರಳದ ವಯನಾಡಿನಲ್ಲಿ ಆಗಿರುವಂತಹ ದುರಂತ ಸಂಭವಿಸುತ್ತವೆ ಎಂದರು.

ನಿಯಮ ಅಗತ್ಯ

ಭೂಮಿಯ ರಚನೆಯ ಅಧ್ಯಯನ ಮಾಡದೆ ಗುಡ್ಡಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದರೆ ಅಂಕೋಲಾದ ಶಿರೂರಿನಲ್ಲಿ ಆದಂತಹ ದುರಂತ ಸಂಭವಿಸುತ್ತವೆ. ಭೂಮಿಯ ಮೇಲಿರುವ ಮುರಕಲ್ಲು ಬಹಳ ಗಟ್ಟಿಮುಟ್ಟಾಗಿರುತ್ತದೆ. ಅದರ ಕೆಳಗಿನ ಪದರದಲ್ಲಿ ಇರುವುದು ಕೇವಲ ಜೇಡಿ ಮಣ್ಣಾಗಿದ್ದು, ಅದು ಬಹಳ ಅಪಾಯ ತರುತ್ತದೆ. ಮಣಿಪಾಲದಲ್ಲಿಯೂ ಸಹ ಅವೈಜ್ಞಾನಿಕವಾಗಿ ಕೆಂಪು ಕಲ್ಲು ಕೊರೆಯಲಾಗುತ್ತದೆ. ಮಾನವ ನಿರ್ಮಿತ ಭೂಕುಸಿತಗಳು ಆಗದಂತೆ ತಡೆಯಲು ಸರ್ಕಾರ ಕಾನೂನಾತ್ಮಕ ನಿಯಮ ಜಾರಿಗೆ ತರಬೇಕು ಎಂದರು.

ಕೃತಕ ನೆರೆ

ಉಡುಪಿ ನಗರಸಭಾ ಪೌರಾಯುಕ್ತ ರಾಯಪ್ಪ ಮಾತನಾಡಿ, ನಗರದಲ್ಲಿ ಸರಾಗವಾಗಿ ಮಳೆಯ ನೀರು ಹರಿದು ಹೋಗುವ ತೋಡು ಮುಚ್ಚಿ ಕಟ್ಟಡ ಕಟ್ಟಿದ್ದರಿಂದ ಈ ಬಾರಿ ಗುಂಡಿಬೈಲು ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಯಿತು. ಕಳೆದ 15 ವರ್ಷಗಳಲ್ಲಿ ಈ ಬಾರಿ ಅತಿಹೆಚ್ಚು ಮಳೆ ಸುರಿದಿದ್ದು, ಮುಂಜಾಗೃತಾ ಕ್ರಮ ಕೈಗೊಂಡ ಪರಿಣಾಮ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದರು.

ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ ಮಂಜನಬೈಲು, ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ ಉಪಸ್ಥಿತರಿದ್ದರು.

ಸಂಘದ ಪ್ರ.ಕಾರ್ಯದರ್ಶಿ ನಜೀರ್​ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್​ ಆರಾಡಿ ವಂದಿಸಿದರು. ಪತ್ರಕರ್ತ ದೀಪಕ್​ ಜೈನ್​ ಕಾರ್ಯಕ್ರಮ ನಿರೂಪಿಸಿದರು.

181 ಮಂದಿಯ ರಕ್ಷಣೆ

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ವಿನಾಯಕ ಕಲ್ಗುಟ್ಕರ್​ ಮಾತನಾಡಿ, ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಅವಘಡಗಳಿಗೆ ಸಂಬಂಧಿಸಿ 340 ಕರೆ ಮತ್ತು 92 ರಕ್ಷಣಾ ಕರೆ ಸ್ವೀಕರಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನೆರೆ ಸಂಭವಿಸಿದ್ದು, ಒಟ್ಟು 181 ಮಂದಿಯನ್ನು ನಮ್ಮ ಸಿಬ್ಬಂದಿ ರಕ್ಷಿಸಿದ್ದಾರೆ. ಪ್ರತಿ 50 ಸಾವಿರ ಜನಸಂಖ್ಯೆಗೆ ಅಥವಾ 40 ಕಿ.ಮೀ.ಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕು. ನಮ್ಮಲ್ಲಿ ಇಲ್ಲ. ಹೀಗಾಗಿ ಎಲ್ಲರೂ ಬೆಂಕಿಯ ಕುರಿತು ಮುಂಜಾಗ್ರತೆ ಹಾಗೂ ರಕ್ಷಣೆಯ ಬಗ್ಗೆ ತಿಳಿದುಕೊಳ್ಳುವುದು ಅತಿ ಅಗತ್ಯ ಎಂದರು.

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…