More

    ವಿಜಯೇಂದ್ರ ಜತೆ ರಾಜಕೀಯ ವಿದ್ಯಮಾನ ಚರ್ಚೆ

    ಮೈಸೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಭಾನುವಾರ ಬೆಂಗಳೂರಿನಲ್ಲಿ ಭೇಟಿ ವಾಡಿದ ಜಿಲ್ಲಾ ಮುಖಂಡರು, ಒಂದು ಗಂಟೆಗೂ ಹೆಚ್ಚು ಕಾಲ ರಾಜಕೀಯ ವಿದ್ಯವಾನಗಳ ಕುರಿತು ಚರ್ಚೆ ನಡೆಸಿದರು.


    ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ‘ಧವಳಗಿರಿ’ ನಿವಾಸದಲ್ಲಿ ವಿಜಯೇಂದ್ರ ಅವರನ್ನು ಮಗಾಲಯ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ನೇತೃತ್ವದಲ್ಲಿ ಭೇಟಿ ವಾಡಿದ ಮುಖಂಡರು, ಜಿಲ್ಲೆಯ ರಾಜಕೀಯ ಸ್ಥಿತಿಗತಿಗಳ ಕುರಿತು ವಾಹಿತಿ ನೀಡಿದರು. ಜಿಲ್ಲೆಯಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ವಾಡುವ ಕುರಿತು ಚರ್ಚಿಸಿದರು.

    ಇದೇ ವೇಳೆ ಹುಟ್ಟುಹಬ್ಬದ ಅಂಗವಾಗಿ ವಿಜಯೇಂದ್ರ ಅವರಿಗೆ ನೆನಪಿನ ಕಾಣಿಕೆ ಹಾಗೂ ಹೂಗುಚ್ಛ ನೀಡಿ ಅಭಿನಂದಿಸಲಾಯಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಾಜಿ ಸದಸ್ಯೆ ಲಕ್ಷ್ಮೀದೇವಿ, ಮುಖಂಡರಾದ ಪಂಚಾಕ್ಷರಿ, ಪಟೇಲ್ ಗಂಗಾಧರ್, ನಂಜುಂಡ್ವಸಾಮಿ, ಸೀಮೆಎಣ್ಣೆ ಪ್ರಕಾಶ್ ರಾಜಣ್ಣ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts