More

    ತೈಲ ಬೆಲೆ ಇಳಿಕೆಯ ಪರ್ವ; ಪೆಟ್ರೋಲ್ 30 ಪೈಸೆ ಅಗ್ಗ

    ನವದೆಹಲಿ: ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ತಿಳಿಯಾಗಿರುವುದು ಹಾಗೂ ಅಮೆರಿಕ-ಚೀನಾ ಮಧ್ಯದ ವ್ಯಾಪಾರ ಒಪ್ಪಂದ ಗೊಂದಲ ಬಗೆಹರಿದಿರುವ ಪರಿಣಾಮ ತೈಲ ಬೆಲೆ ಇಳಿಕೆಯ ಪರ್ವ ಮುಂದುವರಿದಿದೆ.

    ಕಳೆದ 15 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗುತ್ತಿದ್ದು, ಭಾನುವಾರ ಕೂಡ ಇಳಿಕೆ ದಾಖಲಿಸಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 30 ಪೈಸೆ ಇಳಿಕೆಯಾದರೆ ಡೀಸೆಲ್ ದರ 35 ಪೈಸೆ ಕುಸಿದಿದೆ.

    ದೆಹಲಿಯಲ್ಲಿ ಪೆಟ್ರೋಲ್ ಬೆಲೆ 73.86 ರೂಪಾಯಿ, ಡೀಸೆಲ್ 66.96 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 79.47 ರೂಪಾಯಿ, ಡೀಸೆಲ್ 70.19 ರೂಪಾಯಿ, ಚೆನ್ನೈನಲ್ಲಿ ಪೆಟ್ರೋಲ್ 76.71 ರೂಪಾಯಿ, ಡೀಸೆಲ್ 70.73 ರೂಪಾಯಿ, ಕೋಲ್ಕತದಲ್ಲಿ ಪೆಟ್ರೋಲ್ 76.48 ರೂಪಾಯಿ, ಡೀಸೆಲ್ 69.32 ರೂ. ಇದೆ.

    ಬೆಂಗಳೂರಿನಲ್ಲಿ ಪೆಟ್ರೋಲ್ 76.33 ರೂಪಾಯಿ, ಡೀಸೆಲ್ 69.19 ರೂಪಾಯಿಗೆ ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts