ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದರ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ, ಜೀವ ರಕ್ಷಕ ಹಾಗೂ ವಿಪತ್ತು ನಿರ್ವಹಣೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಇಲ್ಲಿನ ಕಾಲೇಜು ಮತ್ತು ನೇತ್ರಾವತಿ ನದಿ ಸಂಗಮ ಸ್ಥಳದಲ್ಲಿ ನಡೆಯಿತು.
ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್‌ನ ಟೀಮ್ ಕಮಾಂಡರ್ ಶಾಂತಿಲಾಲ್, ಅಧಿಕಾರಿಗಳಾದ ದೇವರಾಜ್ ಇಕ್ಕೇರಿ, ಜ್ಞಾನೇಶ್, ನಿಂಗೇಗೌಡ, ಯಲ್ಲಪ್ಪ, ಅಲ್ವಿನ್ ಜಗದೀಶ್, ಶ್ರೀಲಾಲ್, ರಮೇಶ್ ರೆಡ್ಡಿ, ಜಾಕ್ಲಿನ್ ವಿನು, ತನ್ವೀರ್ ಅಹಮ್ಮದ್, ಸ್ವಾಮಿ, ಬಾಲಾಜಿ, ಬಾಲಕೃಷ್ಣ, ಬಸಬು ಸಾಹೇಬ್ ಅವರನ್ನು ಒಳಗೊಂಡ ಎಸ್‌ಡಿಆರ್‌ಎಫ್ ತಂಡ ಬಹುಮಹಡಿಯಲ್ಲಿ ಯಾವುದೇ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯದ ಸ್ವರೂಪ, ನದಿಯಲ್ಲಿ ಅಥವಾ ನೀರಿನಲ್ಲಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯತಂತ್ರಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ನಡೆಸಿಕೊಟ್ಟರು.
ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣ ರಾವ್ ಆರ್ತಿಲ, ಪ್ರಾಂಶುಪಾಲ ಡಾ.ಶೇಖರ್ ಎಂ.ಬಿ., ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರವೀಣ್ ಕುಡುಮಾರ್, ವಿವಿಧ ವಿಭಾಗಗಳ ಅಧಿಕಾರಿಗಳಾದ ರವಿರಾಜ್ ಎಸ್., ಡಾ.ಹರಿಪ್ರಸಾದ್ ಎಸ್., ಕೇಶವ ಕುಮಾರ ಬಿ., ನಂದೀಶ್ ವೈಡಿ, ಬಾಲಾಜಿ ಎಂ.ಪಿ., ಪ್ರೊ.ಹುಚ್ಚೇ ಗೌಡ, ದಶರಥ ಮೊದಲಾದವರು ಭಾಗವಹಿಸಿದ್ದರು.