ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸಿರುವ ‘ಚಪಾಕ್’ ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಮೂಲಕ ನಿರಾಶೆ ಮೂಡಿಸಿದರೆ, ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಚಿತ್ರದ ಕಲೆಕ್ಷನ್ ಜೋರಾಗಿಯೇ ಆಗುತ್ತಿದ್ದು, ನಿರೀಕ್ಷೆ ಹೆಚ್ಚಾಗುತ್ತಿದೆ.
ಈ ಮೂಲಕ ಒಂದೇ ದಿನ ಬಿಡುಗಡೆ ಕಂಡಿರುವ ಬಹುನಿರೀಕ್ಷಿತ ಎರಡು ಸಿನಿಮಾಗಳ ಪೈಕಿ ಒಂದು ಹಿನ್ನಡೆ ಕಂಡಿದ್ದರೆ ಮತ್ತೊಂದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಆಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನದ ಘಟನೆಯನ್ನು ಆಧರಿಸಿ ನಿರ್ವಿುಸಲಾದ ‘ಚಪಾಕ್’ಗೆ ನಿರ್ದೇಶಕಿ ಮೇಘನಾ ಗುಲ್ಜಾರ್ ಆಕ್ಷನ್-ಕಟ್ ಹೇಳಿದ್ದು, ಜ. 10ರಂದು ಚಿತ್ರ ಭರ್ಜರಿ ಬಿಡುಗಡೆ ಕಂಡಿತ್ತು. ಮೊದಲ ದಿನ 4.77 ಕೋಟಿ ರೂ. ಗಳಿಕೆ ಕಂಡ ‘ಚಪಾಕ್’, ಎರಡನೇ ದಿನ 6.9 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮೊದಲೆರಡು ದಿನಗಳಲ್ಲಿ ಒಟ್ಟು 11.67 ಕೋಟಿ ರೂ. ಗಳಿಕೆ ಕಂಡಿದ್ದರೂ ಇದು ಕಡಿಮೆ ಎಂದೇ ಹೇಳಲಾಗುತ್ತಿದೆ.
ಚಿತ್ರ ಬಿಡುಗಡೆಗೂ ಮುನ್ನ ವಿವಾದಿತ ಜೆಎನ್ಯುುಗೆ ದೀಪಿಕಾ ಭೇಟಿ ನೀಡಿದ್ದೂ ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಏಕೆಂದರೆ, ದೀಪಿಕಾ ಜೆಎನ್ಯುುಗೆ ಭೇಟಿ ಕೊಟ್ಟ ಬಳಿಕ ಅದೇ ಕಾರಣಕ್ಕೆ ಅವರ ಚಿತ್ರವನ್ನು ವಿರೋಧಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿಬಂದಿದ್ದವು. ಇನ್ನು ಈ ಚಿತ್ರಕ್ಕೆ ‘ಫಾಕ್ಸ್ ಸ್ಟಾರ್ ಸ್ಟುಡಿಯೋಸ್’ ಹಾಗೂ ಗೋವಿಂದ್ ಸಿಂಗ್ ಸಂಧು ಜತೆ ದೀಪಿಕಾ ಪಡುಕೋಣೆ ಮತ್ತು ಮೇಘನಾ ಗುಲ್ಜಾರ್ ಕೂಡ ಬಂಡವಾಳ ಹೂಡಿದ್ದಾರೆ. ಮತ್ತೊಂದೆಡೆ ಶಿವಾಜಿಯ ಮರಾಠಾ ಸಾಮ್ರಾಜ್ಯದ ಸೇನಾಧಿಪತಿ ತಾನಾಜಿ ಮಲುಸಾರೆ ಜೀವನಾಧಾರಿತ ‘ತಾನಾಜಿ: ದ ಅನ್ಸಂಗ್ ವಾರಿಯರ್’ ಒಳ್ಳೆಯ ಗಳಿಕೆಯನ್ನೇ ಕಾಣುತ್ತಿದೆ. ‘ಚಪಾಕ್’ ಬಿಡುಗಡೆ ಆದ ದಿನವೇ ತೆರೆ ಕಂಡಿರುವ ‘ತಾನಾಜಿ’ ಮೊದಲ ದಿನವೇ 15.10 ಕೋಟಿ ರೂ., ಎರಡನೇ ದಿನ 20.57 ಕೋಟಿ ರೂ. ಕಲೆಕ್ಷನ್ನೊಂದಿಗೆ ಮೊದಲೆರಡು ದಿನಗಳಲ್ಲಿ ಒಟ್ಟು 35.67 ಕೋಟಿ ರೂ. ಗಳಿಕೆ ಕಂಡಿದೆ. ಓಂ ರಾವತ್ ನಿರ್ದೇಶನದ ಈ ಸಿನಿಮಾಗೆ ನಿರ್ವಪಕ ಭೂಷನ್ ಕುಮಾರ್, ಕೃಷನ್ ಕುಮಾರ್ ಜತೆಗೆ ಅಜಯ್ ದೇವಗನ್ ಕೂಡ ಬಂಡವಾಳ ಹೂಡಿದ್ದಾರೆ. -ಏಜೆನ್ಸೀಸ್