ಹಿರಿಯರಿಗೆ, ಅಂಗವಿಕಲರಿಗೆ ಮನೋಸ್ಥೈರ್ಯ ಮುಖ್ಯ

ಶಿವಮೊಗ್ಗ: ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಸ್ಪೂರ್ತಿ ಮತ್ತು ಮನೋಸ್ಥೈರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಹಿರೇಮಠ್ ಹೇಳಿದರು.

ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಮತ್ತು ವಾರ್ತಾ ಇಲಾಖೆ ಆಶ್ರಯದಲ್ಲಿ ವಿಶ್ವ ವಿಕಲಚೇತನ ದಿನದ ಅಂಗವಾಗಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಏರ್ಪಡಿಸಿದ್ದ ಕಾನೂನು ಸೇವೆಗಳ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಆರೋಗ್ಯ ಎಷ್ಟು ಮುಖ್ಯ ಎಂಬುದು ತೊಂದರೆ ಉಂಟಾದಾಗ ಮಾತ್ರ ಅರಿವಾಗುತ್ತದೆ. ಅದರಲ್ಲೂ ದೈಹಿಕ ಅಥವಾ ಮಾನಸಿಕವಾಗಿ ವಿಕಲತೆಯಿಂದ ಬಳಲುವವರ ಸ್ಥಿತಿ ಹೇಳತೀರದು. ಇಂತಹ ಸಂದರ್ಭದಲ್ಲಿ ಮನಸ್ಸನ್ನು ಸದೃಢ ಮಾಡಿಕೊಂಡು ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ಸಾಧನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಅವಘಡಗಳು ಸಂಭವಿಸಿ ಹಾಸಿಗೆ ಹಿಡಿದರೆ ಎಲ್ಲರ ನಿರ್ಲಕ್ಷ್ಯ್ಕೊಳಗಾಗುತ್ತಾರೆ. ಯಾರೊಬ್ಬರೂ ಸಹಾಯಕ್ಕೆ ಬರುವುದಿಲ್ಲ. ಆಗ ದೈಹಿಕಕ್ಕಿಂತ ಮಾನಸಿಕವಾಗಿ ಘಾಸಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ದೃತಿಗೆಡದೇ ಸಂಕಷ್ಟಗಳನ್ನು ಎದುರಿಸುವ ಗುಣ ಬೆಳೆಸಿಕೊಂಡು ಮತ್ತೊಬ್ಬರಿಗೆ ಮಾದರಿ ಆಗಬೇಕು ಎಂದು ಹೇಳಿದರು.

ಹಿರಿಯರಿಗಾಗಿ, ಅಂಗವಿಕಲರನ್ನು ಅವಮಾನಿಸದೇ, ಕಡೆಗಣಿಸದೇ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು. ಸರ್ಕಾರ ಕೂಡ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಅನೇಕ ಸೌಲಭ್ಯ ಕಲ್ಪಿಸಿದ್ದು ಕಾನೂನು ಭದ್ರತೆ ಒದಗಿಸಿದೆ. ಹಿರಿಯ ನಾಗರಿಕರು ತಮ್ಮ ಜೀವನ ಕೊನೆಗಳಿಗೆಗೆ ಬೇಕಾದ ಅವಶ್ಯಕತೆಗಳಿಗೆ ಭದ್ರತೆ ಮಾಡಿ ಮಿಕ್ಕಿದರೆ ಮಕ್ಕಳಿಗೆ ನೀಡಬೇಕು ಎಂಬ ಸಲಹೆ ನೀಡಿದರು.

ಕಾನೂನುಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ್ ಬದಾಮಿ, ಎಸ್ಪಿ ಅಭಿನವ ಖರೆ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶಿಲ್ಪಾ ದೊಡ್ಡಮನಿ, ಸಂಪನ್ಮೂಲ ವ್ಯಕ್ತಿ ಆಶಾ ಉಪಸ್ಥಿತರಿದ್ದರು. ಇದೇ ವೇಳೆ ಅಂಗವಿಕಲರಿಗೆ ಶ್ರವಣ ಸಾಧನ ಹಾಗೂ ಹಿರಿಯ ನಾಗರಿಕರಿಗೆ ಗುರುತಿನ

ಅನೇಕ ಪ್ರಕರಣಗಳಲ್ಲಿ ಪೋಷಕರಿಂದ ಅವರ ಇಡೀ ಜೀವಮಾನದ ಗಳಿಕೆಯನ್ನು ಮತ್ತು ಆಸ್ತಿಯನ್ನು ಹೆತ್ತ ಮಕ್ಕಳೇ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಅವರನ್ನು ಬೀದಿ ಪಾಲು ಮಾಡಿದ ನೂರಾರು ಘಟನೆಗಳು ನಡೆದಿದ್ದು, ಹಿರಿಯ ನಾಗರಿಕರು ಈ ಹಿನ್ನಲೆಯಲ್ಲಿ ಎಚ್ಚರಿಕೆ ವಹಿಸಬೇಕು.

| ಪ್ರಭಾವತಿ ಹಿರೇಮಠ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ