ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಬೆಳಗಾವಿ: ಹಿರಿಯ ಅದಿಕಾರಿಗಳು ತಮ್ಮ ಕೆಳಹಂತದ ಅಸಮರ್ಥ ಅದಿಕಾರಿಗಳಲ್ಲಿ ಶಿಸ್ತು ಕ್ರಮದ ಭಯ ಹುಟ್ಟಿಸಿದಾಗ ಮಾತ್ರ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದ ಸುವರ್ಣ ವಿಧಾನಸೌಧದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅದಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಜನಪ್ರತಿನಿಗಳ ಹಾಗೂ ಉನ್ನತ ಅಕಾರಿಗಳ ಪತ್ನಿ, ಮಕ್ಕಳು ಯಾರೂ ಬೀದಿ ಬದಿಯಲ್ಲಿ ಶೌಚಕ್ಕೆ ತೆರಳುವುದು ಕಂಡಿಲ್ಲ. ಆದರೆ, ಈವರೆಗೂ ಗ್ರಾಮೀಣ ಪ್ರದೇಶದಲ್ಲಿನ ಸಾವಿರಾರು ಕುಟುಂಬ ಗಳ ಹೆಣ್ಣುಮಕ್ಕಳು ಅದನ್ನೇ ಅನುಸರಿಸುತ್ತಿದ್ದಾರೆ. ಇಂದಿಗೂ ಕರ್ನಾಟಕ ಬಯುಲು ಶೌಚ ಮುಕ್ತ ರಾಜ್ಯವಾಗದಿರಲು ಕಾರಣಗಳೇನು ಎಂಬುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ದಕ್ಷ ಅದಿಕಾರಿಗಳು ಅಭಿವೃದ್ಧಿಗೆ ಪೂರಕವಾದ ಸರ್ಕಾರದ ನೀತಿ ನಿರ್ಧಾರ ಮಾಡಿ, ಜನಪ್ರತಿನಿಗಳ ಮೂಲಕ ಕಾರ್ಯಗತಗೊಳಿಸುತ್ತಾರೆ. ಆದ್ದರಿಂದ ಸಿಇಒಗಳ ಮೇಲೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ, ಸಲಹೆ ನೀಡಿ ಮುನ್ನಡೆಸುವ ಅಪರಿಮಿತ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಡ್ಡ ಮಂತ್ರಿಯ ಕೈ ಕೆಳಗೆ ಐಎಎಸ್ ಅದಿಕಾರಿಗಳು ಕೆಲಸ ಮಾಡಬೇಕಿರುವುದು ಸಹಜ ಹಾಗೂ ಅನಿವಾರ್ಯತೆಯೂ ಹೌದು. ಆದರೆ, ತಮ್ಮ ಕೌಶಲಗಳಿಂದಲೇ ರಾಜ್ಯದ ಅಭಿವೃದ್ಧಿ ಯೋಜನೆ ಹಾಗೂ ಅನುಷ್ಠಾನಗೊಳಿಸುವಲ್ಲಿ ಅನುಸರಿಸಬೇಕಾದ ರೂಪುರೇಷಗಳನ್ನು ಸರ್ಕಾರದ ಗಮನಕ್ಕೆ ತನ್ನಿ.

ಗ್ರಾಮೀಣಾಭಿವೃದ್ಧಿಗೆ ಸ್ವತಃ ನೀವೇ ಸಚಿವರಾಗಿದ್ದರೆ ಏನು ಮಾಡುತ್ತಿದ್ದಿರಿ ಎಂಬ ಬಗ್ಗೆ ಹಾಗೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರೂಪರೇಷಗಳಿದ್ದರೆ ತಿಳಿಸಿ ಎಂದು ಸಲಹೆ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹಾಗೂ ಇತರ ಹಿರಿಯ ಅದಿಕಾರಿಗಳು ಹಾಗೂ 27 ಜಿಪಂಗಳ ಮುಖ್ಯ ಕಾರ್ಯನಿರ್ವಾಹಕ ಅಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗಾರರನ್ನು ದೂರಿಟ್ಟು ಸಭೆ: ಸಭೆ ಆರಂಭವಾಗುತ್ತಿದ್ದಂತಯೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್ ಮಾಧ್ಯಮ ಪ್ರತಿನಿದಿಗಳನ್ನು ಸಭಾಂಗಣದಿಂದ ಹೊರಹಾಕಿದರು. ಸ್ವಚ್ಛ ಭಾರತ ಮಿಷನ್, ತೆರಿಗೆ ಸಂಗ್ರಹ, ಪ್ರವಾಹ ಸಂದರ್ಭದಲ್ಲಿ ಉಂಟಾದ ಹಾನಿ ಕುರಿತು ಹಾಗೂ ಇಲಾಖೆಯ ಇನ್ನಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಷ್ಟೆಲ್ಲ ಯೋಜನೆ ರೂಪಿಸಿ, ಹಣ ಖರ್ಚು ಮಾಡಿದಾಗಲೂ ಈವರೆಗೆ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ತಲುಪದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರೈತರ ಪ್ರತ್ಯೇಕ ಬಜೆಟ್, ಭಾಗ್ಯಲಕ್ಷ್ಮೀ ಅಂತಹ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಅಂತಹ ಹೊಸ ಯೋಜನೆ ರೂಪಿಸಿ ಪ್ರಗತಿಗೆ ಕೈಜೋಡಿಸಬೇಕು.
|ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ