ಮೈಸೂರು: ಸಾಮಾನ್ಯ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಕಾಣಬೇಕು. ಅಂಗವೈಕಲ್ಯತೆಯಿಂದ ಬಳಲುವ ಮಕ್ಕಳನ್ನು ತಾತ್ಸಾರ ಮನೋಭಾವದಿಂದ ನೋಡದೆ ಸರಿಸಮಾನವಾಗಿ ಕಂಡು ಅವಕಾಶ ಒದಗಿಸಿದರೆ ಖಂಡಿತ ಎಲ್ಲರಂತೆ ಸಮಾಜದಲ್ಲಿ ಬದುಕಬಲ್ಲರು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರು ವರ್ಷ ಮೇಲ್ಪಟ್ಟ 15 ವರ್ಷದೊಳಗಿನ ಅಂಗವಿಕಲತೆಯುಳ್ಳ ಮಕ್ಕಳಿಗೆ ವೈದ್ಯಕಿ ೀಯ ತಪಾಸಣಾ ಶಿಬಿರವನ್ನು ಅಲೀಂ ಸಂಸ್ಥೆ ವತಿಯಿಂದ ಆಯೋಜಿಸಿರುವುದು ಸಂತಸದ ವಿಚಾರ ಎಂದರು.
ಅಂಗವಿಕಲ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಸಾಮಾನ್ಯ ಮಕ್ಕಳಂತೆ ಈ ಮಕ್ಕಳನ್ನು ಸರಿಸಮಾನವಾಗಿ ಕಂಡು ಪ್ರೋತ್ಸಾಹ ನೀಡಬೇಕು. ಹುಟ್ಟು-ಸಾವು ಯಾವ ರೀತಿ ಇರುತ್ತದೋ ಅದೇ ರೀತಿ ಕೆಲವು ಮಕ್ಕಳಿಗೆ ಹುಟ್ಟಿನಿಂದ ಬರುವ ಸಮಸ್ಯೆಗೆ ದೂಷಣೆ ಮಾಡದೆ ದೇವರು ಕೊಟ್ಟ ಮಗು ಎನ್ನುವಂತೆ ನೋಡಿ ಬೆಳೆಸಬೇಕು. ನಾವು ಅವರನ್ನು ನಿರ್ಲಕ್ಷೃ ಮಾಡುವ ಬದಲಿಗೆ ಅವಕಾಶ ಕೊಡಬೇಕು ಎಂದರು. ಈ ಸಂದರ್ಭ ಡಿಡಿಪಿಐ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಹಾಗೂ ಇತರರ ಇದ್ದರು.