More

  ಜೀವಬೆದರಿಕೆ ಬಗ್ಗೆ ವಿವೇಕ್ ಮಾತು ; ಉಗ್ರರ ಬಗ್ಗೆ ಸಿನಿಮಾ ಮಾಡಿದರೆ, ನಮ್ಮ ಜೀವಕ್ಕೆ ಕುತ್ತು

  ‘ದಿ ತಾಷ್ಕೆಂಟ್ ಫೈಲ್ಸ್​’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಭಾರತ ಕರೊನಾ ಮಹಾಮಾರಿಯನ್ನು ಎದುರಿಸಿದ ಸಾಹಸಗಾಥೆಯನ್ನು ಹೇಳಲು ಹೊರಟಿದ್ದಾರೆ. ಹೆಸರು ‘ದಿ ವ್ಯಾಕ್ಸಿನ್ ಸ್ಟೋರಿ’. ಚಿತ್ರ ಪ್ರಾರಂಭವಾಗಿದ್ದು ಹೇಗೆ? ರೀಸರ್ಚ್ ಹೇಗಿತ್ತು? ಎದುರಿಸಿದ ಸವಾಲುಗಳೇನು? ಈ ಸಿನಿಮಾ ಮಾಡಲು ಕಾರಣವೇನು? ಈಗಲೂ ಅವರಿಗೆ ಬೆದರಿಕೆ ಇದೆಯೇ? ಹೀಗೆ ಹಲವು ವಿಷಯಗಳ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ವಿಜಯವಾಣಿ ಜತೆ ಮಾತನಾಡಿದ್ದಾರೆ.

  | ಹರ್ಷವರ್ಧನ್ ಬ್ಯಾಡನೂರು

  • ಕರೊನಾ ಕುರಿತ ಸಿನಿಮಾ ಮಾಡಬೇಕು ಅಂತನ್ನಿಸಿದ್ದು ಏಕೆ?
   ನಾನು ವಿಷಯಾಧಾರಿತ, ನೈಜ ಘಟನೆ ಆಧರಿಸಿದ ಬೇರೆಯವರು ಹೆದರುವ ವಿಷಯಗಳ ಬಗ್ಗೆ ಸಿನಿಮಾ ಮಾಡುತ್ತೇನೆ. 2020ರಲ್ಲೇ ಕರೊನಾ ಬಗ್ಗೆ ಸಿನಿಮಾ ಮಾಡಲು ನಿರ್ಧರಿಸಿ ರೀಸರ್ಚ್ ಪ್ರಾರಂಭಿಸಿದ್ದೆ. ಕೆಲವು ಭಾರತೀಯರು ಸೇರಿ ವಿಶ್ವಾದ್ಯಂತ ಹಲವರು ಭಾರತದಲ್ಲಿ ತುಂಬ ಜನ ಸತ್ತು ಹೋಗುತ್ತಾರೆ, ಆರೋಗ್ಯ ಸೌಲಭ್ಯವಿಲ್ಲ, ಹೆಚ್ಚು ಜನಸಂಖ್ಯೆಯಿದೆ, 40ರಿಂದ 50 ಕೋಟಿ ಜನರಿಗೆ ಕರೋನಾ ಬರಲಿದೆ ಅಂತೆಲ್ಲ ಹೇಳುತ್ತಿದ್ದರು. ಆದರೆ, ಹಾಗಾಗಲಿಲ್ಲ. ಭಾರತ ಧೈರ್ಯದಿಂದ ಎದುರಿಸಿ ಬಚಾವಾಯಿತು. ಅದರ ಹಿಂದೆ ನಮ್ಮ ಲಸಿಕೆಯ ಶಕ್ತಿಯಿತ್ತು. ಲಸಿಕೆ ತಯಾರಿಸುವಾಗಲೇ ತುಂಬ ಜನ ಭಾರತದಿಂದ ಇದು ಸಾಧ್ಯವಿಲ್ಲ. ಲಸಿಕೆ ಮಾಡಿದರೂ ಅದು ಸರಿಯಿರುವುದಿಲ್ಲ. ನಾವು ವಿದೇಶೀ ಲಸಿಕೆ ತೆಗೆದುಕೊಂಡರೆ ಉತ್ತಮ ಎನ್ನುತ್ತಿದ್ದರು. ಾರ್ಮ ಲಾಬಿ, ಅಂತಾರಾಷ್ಟ್ರೀಯ ಶಕ್ತಿಗಳು ಇಲ್ಲಿನ ಕೆಲವರಿಗೆ ಹಣ ಕೊಟ್ಟು ಹೀಗೆ ಹೇಳಿಸುತ್ತಿದ್ದರು. ಹಣ ಪಡೆದು ಭಾರತದ ವಿರುದ್ಧವೇ ಯಾರು? ಏಕೆ? ಮಾತನಾಡುತ್ತಾರೆ. ಅದು ಅಮಾನವೀಯ. ಹೀಗಾಗಿಯೇ ಈ ಸಿನಿಮಾ ಮಾಡಲು ಮುಂದಾದೆ.

  ಇದನ್ನೂ ಓದಿ : ಮಮ್ಮುಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರಕ್ಕೆ ಸಿಕ್ತು ಯು/ಎ ಪ್ರಮಾಣಪತ್ರ

  ಜೀವಬೆದರಿಕೆ ಬಗ್ಗೆ ವಿವೇಕ್ ಮಾತು ; ಉಗ್ರರ ಬಗ್ಗೆ ಸಿನಿಮಾ ಮಾಡಿದರೆ, ನಮ್ಮ ಜೀವಕ್ಕೆ ಕುತ್ತು
  • ರೀಸರ್ಚ್ ಹೇಗೆ ನಡೆಯಿತು?
   ಲಸಿಕೆ ತಯಾರಿಸಿದ ಇಂಡಿಯನ್ ಕೌನ್ಸಿಲ್ ಆ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ವಿರಾಲಜಿಯ ವಿಜ್ಞಾನಿಗಳ ಜತೆ ಸೇರಿ ರೀಸರ್ಚ್ ಮಾಡಿದೆವು. ಕರೊನಾ ಪ್ರಾರಂಭವಾದಾಗಿನಿಂದ ಯಾವ ದಿನ ಏನಾಯಿತು? ಹೇಗಾಯಿತು? ಯಾಕಾಯಿತು? ಎಂಬುದರ ಮಾಹಿತಿ ಕಲೆ ಹಾಕಿ ಸಿನಿಮಾ ಮಾಡಿದೆವು. ಇದು ಕೇವಲ ಸಿನಿಮಾ ಮಾತ್ರವಲ್ಲ, ಭಾರತ ಲಸಿಕೆ ಹೇಗೆ ತಯಾರಿಸಿತು ಎಂಬುದರ ದಾಖಲಾತಿ ಕೂಡ. ಭಾರತದ ವಿಜ್ಞಾನಿಗಳು ಯಾರಿಂದಲೂ, ಏನನ್ನೂ ನಿರೀಕ್ಷಿಸದೇ ಹಗಲು, ರಾತ್ರಿ ಎನ್ನದಂತೆ ದುಡಿಯುತ್ತಿದ್ದರು. ಇದು ಅಂತಹ ಸೂಪರ್‌ಹೀರೋಗಳ ಸಿನಿಮಾ. ಕೆಲವರು ನಮ್ಮ ದೇಶವನ್ನು ಹಾಳು ಮಾಡಲು, ಇಡೀ ಮಾನವ ಕುಲವನ್ನೇ ಮುಗಿಸಲು ಮುಂದಾಗಿದ್ದರೆ, ಕೆಲವರು ಲಸಿಕೆ ತಯಾರಿಸಿ, ವಿಶ್ವವನ್ನು ಉಳಿಸಿದರು. ಇದು ಭಾರತದಿಂದ ಅಸಾಧ್ಯವೆನ್ನುತ್ತಿದ್ದವರು ಮತ್ತು ಭಾರತದಿಂದ ಸಾಧ್ಯ ಎನ್ನುತ್ತಿದ್ದವರ ನಡುವಿನ ಯುದ್ಧದ ಕಥೆಯಿದು.
  • ಸಿನಿಮಾದ ಎಷ್ಟು ಭಾಗ ನೈಜ ಘಟನೆಯಾಧಾರಿತ?
   100ಕ್ಕೆ ನೂರು ರಿಯಲ್. ಎಲ್ಲವೂ ನೈಜ ಘಟನೆಯಾಧಾರಿತ ವಿಷಯಗಳು. ರೀಸರ್ಚ್, ಮಾಹಿತಿ ಆಧರಿಸಿ ಮಾಡಿರುವ ಸಿನಿಮಾ. ಭಾರತದ ವಿರುದ್ಧ ಧ್ವನಿ ಎತ್ತಿದವರ ಹಾಗೂ ಟೂಲ್ ಕಿಟ್ ಗ್ಯಾಂಗ್ ವಿಷಯದಲ್ಲಿ ಮಾತ್ರ ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.

  ಇದನ್ನೂ ಓದಿ : ‘ನ್ಯಾಷನಲ್​ ಸಿನಿಮಾ ಡೇ’ ನಂದು ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್​ ಬೆಲೆ ಕೇವಲ 99 ರೂಪಾಯಿ

  ಜೀವಬೆದರಿಕೆ ಬಗ್ಗೆ ವಿವೇಕ್ ಮಾತು ; ಉಗ್ರರ ಬಗ್ಗೆ ಸಿನಿಮಾ ಮಾಡಿದರೆ, ನಮ್ಮ ಜೀವಕ್ಕೆ ಕುತ್ತು
  • ಸಿನಿಮಾ ವೇಳೆ ನೀವು ಎದುರಿಸಿದ ಸವಾಲುಗಳೇನು?
   ಇದು ವಿಜ್ಞಾನದ ಕುರಿತ ಸಿನಿಮಾ. ಹೆಚ್ಚು ಜನರಿಗೆ ವಿರಾಲಜಿ ಬಗ್ಗೆ ಗೊತ್ತಿಲ್ಲ. ನನಗೂ ಗೊತ್ತಿರಲಿಲ್ಲ. ಹೀಗಾಗಿಯೇ ಮೊದಲು ನಾನು ತಿಳಿದುಕೊಂಡೆ, ನಂತರ ಚಿತ್ರತಂಡಕ್ಕೆ ಅರ್ಥ ಮಾಡಿಸಿದೆ. ಚಿತ್ರದಲ್ಲಿ ಭಾವನೆಗಳಿವೆ, ವೈಯಕ್ತಿಕ ತ್ಯಾಗಗಳ ಬಗ್ಗೆ ಬೆಳಕು ಚೆಲ್ಲಿದ್ದೇವೆ. ಪ್ರತಿಯೊಂದು ಹಂತದಲ್ಲೂ ಕುತೂಹಲ ಮೂಡಿಸುವ, ನೋಡಿಸಿಕೊಂಡು ಹೋಗುವ ಚಿತ್ರ.
  • ‘ಕಾಶ್ಮೀರ್ ಫೈಲ್ಸ್’ಗೂ ವಿರೋಧ ವ್ಯಕ್ತಪಡಿಸಿದ್ದರು. ಈ ಚಿತ್ರಕ್ಕೂ ಅದೇ ರೀತಿ ವಿರೋಧವಿದೆಯೇ?
   ಆಗ ಯಾರೆಲ್ಲಾ ವಿರೋಧಿಸಿದ್ದರೋ, ಅವರೇ ಈಗ ಈ ಸಿನಿಮಾ ನೋಡದೇ ವಿರೋಧಿಸುತ್ತಿದ್ದಾರೆ. ಅವರು ಎಲ್ಲದನ್ನೂ ವಿರೋಧಿಸುತ್ತಾರೆ. ಭಾರತದ ಬೆಳವಣಿಗೆ ನೋಡಲು ಇಷ್ಟಪಡದವರು ಅವರೇ. ಭಾರತದಲ್ಲಿ ಆಗುತ್ತಿರುವ ಬದಲಾವಣೆ, ಬೆಳವಣಿಗೆ ಬಗ್ಗೆ ನನಗೆ ಖುಷಿಯಿದೆ. ಹೊಸ, ಆಧುನಿಕ ಭಾರತದ ಬಗ್ಗೆ ಖುಷಿಯಿದೆ. ನಾನು ನನ್ನ ಭಾರತವನ್ನು ಹೇಗೆ ನೋಡುತ್ತೀನೋ, ಹಾಗೆ ಸಿನಿಮಾ ಮಾಡುತ್ತೇನೆ. ಒಬ್ಬೊಬ್ಬರು ಒಂದೊಂದು ರೀತಿ ನೋಡುತ್ತಾರೆ. ಕೆಲವರಿಗೆ ಕೆಟ್ಟದ್ದು ಕಾಣಬಹುದು. ಎಲ್ಲ ವಿಷಯದಲ್ಲೂ ಕೆಟ್ಟದ್ದು ಇರುತ್ತದೆ. ನಾವು ಪಾಸಿಟಿವಿಟಿ ಬಗ್ಗೆ ಗಮನ ಹರಿಸಬೇಕು. ಹೀಗಾಗಿಯೇ ಭಾರತದ ಪಾಸಿಟಿವ್ ಕಥೆಯನ್ನು ಇಡೀ ವಿಶ್ವಕ್ಕೆ ತಿಳಿಸಲು ಇಚ್ಛಿಸುತ್ತೇನೆ.

  ಇದನ್ನೂ ಓದಿ : ಖ್ಯಾತ ನಿರ್ಮಾಪಕನ ಜತೆ ಬಹುಭಾಷಾ ನಟಿ ತ್ರಿಷಾ ಮದುವೆ? ಶೀಘ್ರದಲ್ಲೇ ಘೋಷಣೆ ಸಾಧ್ಯತೆ

  ಜೀವಬೆದರಿಕೆ ಬಗ್ಗೆ ವಿವೇಕ್ ಮಾತು ; ಉಗ್ರರ ಬಗ್ಗೆ ಸಿನಿಮಾ ಮಾಡಿದರೆ, ನಮ್ಮ ಜೀವಕ್ಕೆ ಕುತ್ತು
  • ಕನ್ನಡದ ಸಪ್ತಮಿ ಗೌಡ ಕೂಡ ನಟಿಸಿದ್ದಾರೆ.
   ಸಪ್ತಮಿ ಗೌಡ ಜತೆ ಮೊದಲ ಬಾರಿ ಕೆಲಸ ಮಾಡಿದೆ. ತುಂಬ ಒಳ್ಳೆಯ ಹಾಗೂ ಪ್ರತಿಭಾನ್ವಿತ ಹುಡುಗಿ. ಜತೆಗೆ ನಾನಾ ಪಟೇಕರ್, ಪಲ್ಲವಿ ಜೋಶಿ, ಅನುಪಮ್ ಖೇರ್ ಅದ್ಭುತ ಕಲಾವಿದರು ನಟಿಸಿದ್ದಾರೆ. ಗೋಲ್ಡನ್ ಕಾಸ್ಟಿಂಗ್ ಎನ್ನಬಹುದು.
  • ಪ್ರೇಕ್ಷಕರು ಚಿತ್ರದಲ್ಲಿ ಏನನ್ನು ನಿರೀಕ್ಷಿಸಬಹುದು?
   ಪ್ರೇಕ್ಷಕರಿಗೆ ಗೊತ್ತಿಲ್ಲದ ವಿಷಯವನ್ನು ರೀಸರ್ಚ್ ಮಾಡಿ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಹೀಗೆಲ್ಲಾ ನಡೆಯಿತಾ ಅಂತ ಆಶ್ಚರ್ಯವಾಗಲಿದೆ. ಭಾರತದ ಬಗ್ಗೆ ಹೆಮ್ಮೆಯಾಗಲಿದೆ. ಮಹಿಳಾ ವಿಜ್ಞಾನಿಗಳ ಬಗ್ಗೆ ಹೆಮ್ಮೆಯೆನಿಸಲಿದೆ. ಮಹಿಳೆಯರ ಬಗ್ಗೆ ಗೌರವ ಹೆಚ್ಚಲಿದೆ. ಖುಷಿಯಿಂದ ಕಣ್ಣೀರು ತರಿಸುವ ಸಿನಿಮಾ. ಚಿತ್ರದಲ್ಲಿ ಹಾಡಿಲ್ಲ. ಆದರೆ, ಹಿನ್ನೆಲೆ ಸಂಗೀತ ಅದ್ಭುತವಾಗಿದೆ.

  ಇದನ್ನೂ ಓದಿ : ಖಿನ್ನತೆಯಿಂದ ಸಾವಿಗೆ ಶರಣಾದ ಮಗಳು: ನಟ ವಿಜಯ್​ ಆಂಟೋನಿಯ ಹಳೇ ವಿಡಿಯೋ ವೈರಲ್​

  ಜೀವಬೆದರಿಕೆ ಬಗ್ಗೆ ವಿವೇಕ್ ಮಾತು ; ಉಗ್ರರ ಬಗ್ಗೆ ಸಿನಿಮಾ ಮಾಡಿದರೆ, ನಮ್ಮ ಜೀವಕ್ಕೆ ಕುತ್ತು
  • ಅರ್ಬನ್ ನಕ್ಸಲ್‌ಗಳ ಬಗ್ಗೆ…
   ಪ್ರತಿಯೊಬ್ಬ ಭಾರತೀಯನೂ ಇನ್ನು ಅಭಿವೃದ್ಧಿ ಹೊಂದಬೇಕು, ವಿಶ್ವದ ನಂಬರ್ ಒನ್ ದೇಶವಾಗಬೇಕು ಅಂತ ನಿರ್ಧರಿಸಿದರೆ, ಅರ್ಬನ್ ನಕ್ಸಲ್‌ಗಳ ಆಟಕ್ಕೆ ಕಡಿವಾಣ ಬೀಳಲಿದೆ. ಬೇರೆ ದೇಶಗಳ ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಾರೆ. ಹಲವು ದೇಶಗಳಿಗೆ ನಮ್ಮ ಭಾರತ ಸೂಪರ್ ಪವರ್ ಆಗುವುದು ಇಷ್ಟವಿಲ್ಲ. ಹೀಗಾಗಿಯೇ ಇಲ್ಲಿನ ಕೆಲವರಿಗೆ ಹಣ ಕೊಟ್ಟು ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಯತ್ನ ನಡೆಯುತ್ತಿದೆ. ಅಂಥವರನ್ನು ಎಕ್ಸ್‌ಪೋಸ್ ಮಾಡುತ್ತಿದ್ದೇನೆ.
  • ಈಗಲೂ ಪೊಲೀಸ್ ರಕ್ಷಣೆ ಪಡೆದಿದ್ದೀರಾ?
   ಹೌದು, ಸೆಕ್ಯುರಿಟಿ ಈಗಲೂ ಇದೆ. ಭಯೋತ್ಪಾದನೆ ಕುರಿತು ಸಿನಿಮಾ ಮಾಡಿದರೆ, ನಿಮ್ಮ ಜೀವನಕ್ಕೇ ಕುತ್ತು ಎದುರಾಗುವ ಪರಿಸ್ಥಿತಿ ಇರುವುದು ಈ ದೇಶದ ದುರಾದೃಷ್ಟ. ಆದರೆ, ಅದು ಉಲ್ಟಾ ಆಗಬೇಕು. ಭಯೋತ್ಪಾದಕರಿಗೆ ಕಷ್ಟವಾಗಬೇಕು. ಆದರೆ, ಅವರ ಬಗ್ಗೆ ಮಾತನಾಡುವವರ ಜೀವಕ್ಕೆ ಕಷ್ಟವಿದೆ. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts