ಸ್ಯಾಂಡಲ್‌ವುಡ್‌ ನಿರ್ದೇಶಕರ ಸಂಘಕ್ಕೆ ವಿ.ನಾಗೇಂದ್ರ ಪ್ರಸಾದ್‌ ಸಾರಥಿ

ಬೆಂಗಳೂರು: ಸ್ಯಾಂಡಲ್​​ವುಡ್ ನಿರ್ದೇಶಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿ.ನಾಗೇಂದ್ರ ಪ್ರಸಾದ್ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹಿರಿಯ ನಿರ್ದೇಶಕ ಭಗವಾನ್ ಫಲಿತಾಂಶ ಪ್ರಕಟ ಮಾಡಿದ್ದು, ಉಪಾಧ್ಯಕ್ಷರಾಗಿ ಸಾಧು ಕೋಕಿಲಾ, ರೂಪಾ ಅಯ್ಯರ್, ಕಾರ್ಯದರ್ಶಿಯಾಗಿ ಶರಣ್ ಕಬ್ಬೂರ್, ನಾಗೇಂದ್ರ ಮತ್ತು ಖಜಾಂಚಿಯಾಗಿ ನಾಗೇಶ್ ಟಿ.ಎನ್ ನೇಮಕಗೊಂಡಿದ್ದಾರೆ.

ಮತದಾನ ಮಾಡಿದ 125 ನಿರ್ದೇಶಕರಲ್ಲಿ 10 ಅಸಿಂಧು ಮತಗಳಾಗಿದ್ದರೆ, ವಿ. ನಾಗೇಂದ್ರ ಪ್ರಸಾದ್‌ ಅವರು 100 ಮತಗಳನ್ನು ಗಳಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಆಯ್ಕೆಯಾಗಿರುವ 15 ಮಂದಿ ಸದಸ್ಯರು ಮಾತುಕತೆ ನಡೆಸಿ ಪದಾಧಿಕಾರಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್)