ರೂಪ ವರ್ಗಾವಣೆ ಬೆನ್ನಿಗೆ ಸತ್ಯನಾರಾಯಣ ಸಹ ಎತ್ತಂಗಡಿಯಾದರು

ಬೆಂಗಳೂರು: ಕರ್ನಾಟಕದ ಕಾರಾಗೃಹದ ರೂಪ ಎತ್ತಂಗಡಿಯಾದ ಬೆನ್ನಲ್ಲೇ ಅವರ ಉನ್ನತಾಧಿಕಾರಿಯಾಗಿದ್ದ ಕಾರಾಗೃಹ ಡಿಜಿ ಹೆಚ್​ ಎನ್​ ಸತ್ಯನಾರಾಯಣರಾವ್​ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಗೃಹ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಈ ಆದೇಶಕ್ಕೆ ಅಂಕಿತ ಹಾಕಿದ್ದಾರೆ.

ಕಾರಾಗೃಹದ ಈ ಇಬ್ಬರೂ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರು. ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ (ಟ್ರಾಫಿಕ್) ಡಿಐಜಿಯಾಗಿ ವರ್ಗಾವಣೆ ಮಾಡಿದ್ದರೆ ಸತ್ಯನಾರಾಯಣ ರಾವ್ ಅವರಿಗೆ ಯಾವುದೇ ಸ್ಥಾನವನ್ನು ನೀಡದೆ ಕಾರಾಗೃಹ DG ಸ್ಥಾನದಿಂದ ತೆರವುಗೊಳಿಸಲಾಗಿದೆ.

 

ನಿವೃತ್ತಿಗೂ ಮುನ್ನ ಸೇವೆಯಿಂದ ಮುಕ್ತಿ !?
ಸೇವಾ ನಿವೃತ್ತಿಗೆ ಕೆಲವೇ ದಿನ ಬಾಕಿಯಿರುವಾಗ ಹಿರಿಯ ಐಪಿಎಸ್ ಅಧಿಕಾರಿ ಸತ್ಯನಾರಾಯಣ ರಾವ್‌ ಅವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಮುಕ್ತಿಗೊಳಿಸಿದೆ. ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಈ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *