ಬೆಂಗಳೂರು: ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೋಡಳ್ಳಿ ಶಿವರಾಮ್ ಕೊನೆಯುಸಿರೆಳೆದಿದ್ದಾರೆ.
ಕೋಡಳ್ಳಿ ಶಿವರಾಮ್ ಅವರು ಸೆಪ್ಟೆಂಬರ್ 17ರ ರಾತ್ರಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ನಿಧನರಾದಂತ ಸ್ಯಾಂಡಲ್ ವುಡ್ ನಿರ್ದೇಶಕ, ನಿರ್ಮಾಪಕ ಕೋಡಳ್ಳಿ ಶಿವರಾಮ್ ಅವರ ಅಂತ್ಯಕ್ರಿಯೆಯನ್ನು ಇಂದು ಕುಟುಂಬಸ್ಥರು ನೆರೆವೇರಿಸಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
1978ರಲ್ಲಿ ‘ಗ್ರಹಣ’ ಹೆಸರಿನ ಸಿನಿಮಾ ಬಂತು. ಈ ಚಿತ್ರಕ್ಕೆ ಕಥೆ ಬರೆದಿದ್ದು ಕೋಡಳ್ಳಿ ಶಿವರಾಮ್ ಅವರು. ಈ ಚಿತ್ರವನ್ನು ಟಿಎಸ್ ನಾಗಾಭರಣ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಕೋಡಳ್ಳಿ ಶಿವರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಗಮನ ಸೆಳೆದಿದ್ದಾರೆ.
50 ವರ್ಷಗಳ ನಂತ್ರ ಬಾಲ್ಯದ ಗೆಳತಿಯರನ್ನು ಭೇಟಿಯಾದ ಅಜ್ಜಿ ! ಸ್ನೇಹಿತೆಯರ ಭಾವನಾತ್ಮಕ ವಿಡಿಯೋ ವೈರಲ್
TAGGED:kodallishivaram