More

    ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಏ.9ಕ್ಕೆ ಬಿಡುಗಡೆ ?

    ಬೆಂಗಳೂರು: ಏಪ್ರಿಲ್ 24ರಂದು ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಅದೇ ತಿಂಗಳಲ್ಲಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಸಹ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

    ತರುಣ್ ಸುಧೀರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ರಾಬರ್ಟ್’ ಸಿನಿಮಾ ಏ. 9ಕ್ಕೆ ಬಿಡುಗಡೆ ಆಗಲಿದೆಯಂತೆ. ಈಗಾಗಲೇ ಪೋಸ್ಟರ್ ಮೂಲಕವೇ ಭಾರಿ ನಿರೀಕ್ಷೆ ಮೂಡಿಸಿರುವ ‘ರಾಬರ್ಟ್’, ಶೂಟಿಂಗ್ ಮುಗಿಸಿಕೊಂಡು ಡಬ್ಬಿಂಗ್ ಹಂತದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಎಲ್ಲ ಕೆಲಸ ಮುಗಿಸಿಕೊಂಡು ಏ.9ಕ್ಕೆ ತೆರೆಮೇಲೆ ಬರುವ ಸಾಧ್ಯತೆ ಇದೆ. ಏ.10ರಂದು ‘ಗುಡ್ ಫ್ರೈಡೇ ಇರುವುದರಿಂದ ಅದಕ್ಕೂ ಒಂದು ದಿನ ಮುನ್ನ ‘ರಾಬರ್ಟ್’ ಬಿಡುಗಡೆ ಮಾಡುವುದು ನಿರ್ದೇಶಕರ ಪ್ಲಾನ್​

    ಭದ್ರಾವತಿ ಮೂಲದ ರೂಪದರ್ಶಿ ಆಶಾ ಭಟ್ ಮೊದಲ ಬಾರಿ ದರ್ಶನ್​ಗೆ ಜೋಡಿಯಾಗುವ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಜಗಪತಿ ಬಾಬು ಖಳನಾಗಿ ಕಾಣಿಸಿಕೊಂಡರೆ, ವಿನೋದ್ ಪ್ರಭಾಕರ್, ಸೋನಲ್ ಮೊಂತೆರೊ ಪಾತ್ರವರ್ಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ನಿಭಾಯಿಸಿದ್ದು, ಎಸ್. ಉಮಾಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts