ಏಷ್ಯಾಡ್​: ಸ್ಕ್ವಾಷ್​ನಲ್ಲಿ ದೀಪಿಕಾ ಪಲ್ಲಿಕಲ್​ಗೆ ಕಂಚು

ಜಕಾರ್ತ: ಸ್ಕ್ವಾಷ್​​ನ ಮಹಿಳೆಯರ ಸಿಂಗಲ್ಸ್​ ವಿಭಾಗದ ಸೆಮಿಫೈನಲ್​ನಲ್ಲಿ ಸೋಲನುಭವಿಸಿದ ದೀಪಿಕಾ ಪಲ್ಲಿಕಲ್​ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ದೀಪಿಕಾ ಪಲ್ಲಿಕಲ್​ ಮಲೇಷ್ಯಾದ ಮಾಜಿ ನಂ. 1 ಆಟಗಾರ್ತಿ ನಿಕೋಲ್​ ಡೇವಿಡ್​ ವಿರುದ್ಧ 0-3 (7-11, 9-11, 6-11) ಅಂತರದಿಂದ ಸೋಲನುಭವಿಸಿದರು. ಈ ಸೋಲಿನ ಮೂಲಕ ದೀಪಿಕಾ ಕಂಚಿನ ಪದಕ ಜಯಿಸಿದರು.

ಭಾರತದ ಮತ್ತೋರ್ವ ಸ್ಟಾರ್​ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರು ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಶಿವಶಂಕರಿ ಸುಬ್ರಮಣ್ಯಂ ಅವರನ್ನು ಎದುರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಕ್ವಾಷ್​ನ ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಜಯಿಸುವ ಕನಸು ಇನ್ನೂ ಜೀವಂತವಿದೆ.

ದೀಪಿಕಾ ಕ್ವಾರ್ಟರ್​ಫೈನಲ್ಸ್​ನಲ್ಲಿ ಜಪಾನಿನ ಕೊಬಯಾಶಿ ಮಿಸಾಕಿ ಅವರನ್ನು 0-3 ಅಂತರದಿಂದ ಸೋಲಿಸಿ ಸೆಮಿಫೈನಲ್​ ಪ್ರವೇಶಿಸಿದ್ದರು. (ಏಜೆನ್ಸೀಸ್​)