More

    ಶಿರಡಿ ಸಾಯಿ ಬಾಬಾನ ಭಕ್ತರಿಗೆ ತಂಗಲು, ಪ್ರಸಾದದ ವ್ಯವಸ್ಥೆ, ನಾಳೆ ಸಿಎಂ ಉದ್ಧವ್​ ಠಾಕ್ರೆ ಜತೆ ಸಭೆ: ಸಿಇಒ ದೀಪಕ್​ ಮುಗ್ಲಿಕರ್​

    ಶಿರಡಿ: ಸಾಯಿ ಬಾಬಾನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತಂಗಲು ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಏನೂ ತೊಂದರೆ ಇಲ್ಲ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಮುಗ್ಲಿಕರ್​ ತಿಳಿಸಿದ್ದಾರೆ.

    ನಾಳೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರೊಂದಿಗೆ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

    ಮಾಧ್ಯಮಗಳಲ್ಲಿ ಇಂದು (ಜ.19)ದಿಂದ ಸಾಯಿಬಾಬಾನ ದೇಗುಲ ಬಂದ್​ ಇರುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ದೇವಾಸ್ಥಾನ ತೆರೆದಿದ್ದು, ಬಂದ ಭಕ್ತರಿಗೆ ದರ್ಶನಕ್ಕೆ, ತಂಗಲು ಹಾಗೂ ಪ್ರಸಾದಕ್ಕೆ ತೊಂದರೆ ಇಲ್ಲ ಎಂದು ಮುಗ್ಲಿಕರ್​ ಮಾಹಿತಿ ನೀಡಿದ್ದಾರೆ.

    ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಪ್ರಭಾನಿ ಜಿಲ್ಲೆಯ ಪಥ್ರಿ ಎಂಬ ಗ್ರಾಮವೇ ಸಾಯಿ ಬಾಬಾ ಅವರ ಜನ್ಮ ಸ್ಥಳ ಎಂದು ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

    ಉದ್ಧವ್​ ಠಾಕ್ರೆ ಅವರ ಈ ಹೇಳಿಕೆಯಿಂದಾಗಿ ಶಿರಡಿಯ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್​ ಭಾನುವಾರದಿಂದ ದೇಗುಲ ಬಂದ್​ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts