VIDEO| ಕ್ರೀಡಾಭಿಮಾನಿಗಳು ನೋಡಲೇಬೇಕಾದ ದಿನೇಶ್​ ಕಾರ್ತಿಕ್​ ಅವರ ಅದ್ಭುತ ಕ್ಯಾಚ್!

ವೆಲ್ಲಿಂಗ್ಟನ್​: ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ಬುಧವಾರ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತರೂ ದಿನೇಶ್​ ಕಾರ್ತಿಕ್ ಅವರ ಅದ್ಭುತ ಕ್ಯಾಚಿಗೆ ಮನಸೋತಿರುವ​ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿವೀಸ್​ ತಂಡದ ಆಟಗಾರ ಡ್ಯಾರಿಲ್ ಮಿಚೆಲ್​ ಅವರು ಹಾರ್ದಿಕ್​ ಪಾಂಡ್ಯ ಎಸೆದ 15ನೇ ಓವರ್​ನಲ್ಲಿ ಬಲವಾಗಿ ಹೊಡೆದಾಗ ಬೌಂಡರಿ ಬಳಿ ಇದ್ದ ದಿನೇಶ್​ ಕಾರ್ತಿಕ್​​ ಅವರು ಅದ್ಭುತವಾಗಿ ಕ್ಯಾಚ್​​ ಹಿಡಿದರು. ಸಿಕ್ಸರ್​ ಗೆರೆ ದಾಟುತ್ತಿದ್ದ ಚೆಂಡನ್ನು ಗೆರೆಯ ಅಂಚಿನಲ್ಲಿ ಹಿಡಿದು ತಳ್ಳಿ ಮತ್ತೆ ಜಿಗೆದು ಹಿಡಿಯುವ ಮೂಲಕ ಉತ್ತಮ ಕ್ಯಾಚ್​ಗೆ ಸಾಕ್ಷಿಯಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಆಗಿದ್ದು, ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.

ಇಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ನ್ಯೂಜಿಲೆಂಡ್​ ತಂಡ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್​ ನಷ್ಟಕ್ಕೆ 219 ಕಲೆಹಾಕುವ ಮೂಲಕ ಬೃಹತ್​ ಮೊತ್ತದ ಗುರಿ ನೀಡಿತು. ಗುರಿ ಬೆನ್ನತ್ತಿದ ಭಾರತ 19.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 139 ರನ್​ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾದ ಕಿವೀಸ್​ ವಿರುದ್ಧ 80 ರನ್​ ಭಾರಿ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. (ಏಜೆನ್ಸೀಸ್​)