ಸತತ 6 ಸೋಲಿಗೆ ದಿನೇಶ್ ಬೇಸರ

ಕೋಲ್ಕತ: ಮುಂಚೂಣಿಯಲ್ಲಿ ನಿಂತು ತಂಡವನ್ನು ಆಧರಿಸುವುದು ನನ್ನ ಜವಾಬ್ದಾರಿ ಎಂದು ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಸೋಲು ಬೇಸರ ತರಿಸಿದೆ. ಮತ್ತೊಮ್ಮೆ ಗೆಲುವಿನ ಅವಕಾಶ ಕೈಚೆಲ್ಲಿದೆವು ಎಂದು ಕೆಕೆಆರ್ ತಂಡ ಸತತ 6ನೇ ಸೋಲನುಭವಿಸಿದ ಬಳಿಕ ದಿನೇಶ್ ಕಾರ್ತಿಕ್ ಹೇಳಿಕೊಂಡರು. ಈಡನ್ಸ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ 3 ವಿಕೆಟ್ ಸೋಲು ಕಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ (97*) ಅಜೇಯ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್​ಗೆ 175 ರನ್​ಗಳಿಸಿತು. ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ, ರಿಯಾನ್ ಪರಾಗ್ (47) ಹಾಗೂ ಜೋಫ್ರಾ ಆರ್ಚರ್ (27*) ಬಿರುಸಿನ ಬ್ಯಾಟಿಂಗ್ ಫಲವಾಗಿ 19.2 ಓವರ್​ಗಳಲ್ಲಿ 7 ವಿಕೆಟ್​ಗೆ 177 ರನ್​ಗಳಿಸಿ ಜಯದ ನಗೆ ಬೀರಿತು. ‘ಕೆಲವೊಮ್ಮ ಯೋಜನೆಗಳು ಕೈಗೂಡುವುದಿಲ್ಲ. ತಂಡದ ಆಟಗಾರರ ಮೇಲೆ ನಂಬಿಕೆ ಇದೆ. ಪುಟಿದೇಳುವ ವಿಶ್ವಾಸವಿದೆ’ ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದರು. ಕೆಕೆಆರ್​ನ ಪ್ಲೇ-ಆಫ್ ಹಾದಿ ಕಠಿಣಗೊಂಡರೆ, ರಾಜಸ್ಥಾನ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಕೆಕೆಆರ್: 6 ವಿಕೆಟ್​ಗೆ 175

ರಾಜಸ್ಥಾನ: 19.2 ಓವರ್​ಗಳಲ್ಲಿ 7 ವಿಕೆಟ್​ಗೆ 177

ರಹಾನೆ ಎಲ್​ಬಿಡಬ್ಲ್ಯು ಬಿ ನಾರಾಯಣ್ 34

ಸಂಜು ಸ್ಯಾಮ್ಸನ್ ಬಿ ಪೀಯುಷ್ 22

ಸ್ಟೀವನ್ ಸ್ಮಿತ್ ಬಿ ನಾರಾಯಣ್ 2

ಬೆನ್ ಸ್ಟೋಕ್ಸ್ ಸಿ ರಸೆಲ್ ಬಿ ಪೀಯುಷ್ 11

ರಿಯಾನ್ ಪರಾಗ್ ಹಿಟ್​ವಿಕೆಟ್ ಬಿ ರಸೆಲ್ 47

ಸ್ಟುವರ್ಟ್ ಬಿನ್ನಿ ಸಿ ರಿಂಕು ಬಿ ಪೀಯುಷ್ 11

ಶ್ರೇಯಸ್ ಸಿ ಶುಭ್​ವಾನ್ ಬಿ ಪ್ರಸಿದ್ಧಕೃಷ್ಣ 18

ಜೋಫ್ರಾ ಆರ್ಚರ್ ಅಜೇಯ 27

ಜೈದೇವ್ ಉನಾದ್ಕತ್ ಔಟಾಗದೆ 0

ಇತರ: 5, ವಿಕೆಟ್ ಪತನ: 1-53, 2-57, 3-63, 4-78, 5-98, 6-123, 7-167. ಬೌಲಿಂಗ್: ಬ್ರಾಥ್​ವೇಟ್ 2-0-16-0, ಪ್ರಸಿದ್ಧಕೃಷ್ಣ 3.2-0-43-1, ರಸೆಲ್ 3-0-32-1, ಸುನೀಲ್ ನಾರಾಯಣ್ 4-0-25-2, ಪೃಥ್ವಿರಾಜ್ 2-0-28-0, ಪೀಯುಷ್ ಚಾವ್ಲಾ 4-0-20-3, ನಿತೀಶ್ ರಾಣಾ 1-0-13-0.