ಕರ್ನಾಟಕದ ಬಗ್ಗೆ ಪ್ರಧಾನಿ ಏಕೆ ಪದೇಪದೆ ಮಾತನಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್​

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಏಕೆ ಪದೇಪದೆ ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿಯಾಗಿ ಒಬ್ಬ ಮುಖ್ಯಮಂತ್ರಿ ಕುರಿತು ಹೀಗೆ ಹಗುರವಾಗಿ ಮಾತನಾಡಬಾರದು. ಸಿಎಂ ಆಗಿ ಕುಮಾರಸ್ವಾಮಿ ಅವರು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುಮಾರಸ್ವಾಮಿಯವರನ್ನು ಕಾಂಗ್ರೆಸ್​ ಕ್ಲರ್ಕ್​ನಂತೆ ನಡೆಸಿಕೊಳ್ಳುತ್ತಿದೆ ಎಂಬ ಪ್ರಧಾನಿ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.

ಚುನಾವಣೆ ಗೆಲ್ಲುವ ತಂತ್ರವಾಗಿ ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ ಜಾರಿ ತಂದಿದ್ದಾರೆ. ಈ ಮೊದಲು ಯಾಕೆ ಹೀಗೆ ಯಾವುದೇ ಕಾಯ್ದೆ ತಂದಿರಲಿಲ್ಲ ಎಂದರು. (ದಿಗ್ವಿಜಯ ನ್ಯೂಸ್)

2 Replies to “ಕರ್ನಾಟಕದ ಬಗ್ಗೆ ಪ್ರಧಾನಿ ಏಕೆ ಪದೇಪದೆ ಮಾತನಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್​”

  1. ಮುಂದಿನ ಸಲದಿಂದ ಗುಂಡುರಾಯರಾಪ್ಪಣೆ ಪಡೆದು ಕರ್ನಾಟಕದ ಬಗ್ಗೆ ಪ್ರಧಾನಿಗಳು ಮಾತನಾಡಬೇಕೆಂದು ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಲು ದುರ್ಮಿಶ್ರಸರಕಾರದ ಸಂಪುಟ ಸಲಹೆ ಕೊಡಲಿ.

  2. Karnataka is not your genatic corrupt property from a genetically corrupt people like Congress you cheated the voters you are very cunning Mr gundurao the Prime Minister of India is having alright to criticize your government because you said jds is the B team of BJP but JD MLA as your chief minister and made him as exactly clerk

Leave a Reply

Your email address will not be published. Required fields are marked *