ಇಂದು ನೂತನ ಸಚಿವರ ಖಾತೆ ಹಂಚಿಕೆ ಫೈನಲ್: ದಿನೇಶ್ ಗುಂಡೂರಾವ್​

ಉಮೇಶ್​ ಕತ್ತಿ ಗಡುವು ನೀಡಿ 24 ಅಲ್ಲ, 30 ಗಂಟೆ ಕಳೆದಿದೆ; ಅವರು ಕ್ಷಮೆ ಕೇಳಬೇಕು

ಬೆಂಗಳೂರು: ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಇಂದು ನೂತನ ಸಚಿವರ ಖಾತೆ ಹಂಚಿಕೆ ಫೈನಲ್ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘24 ಗಂಟೆಯಲ್ಲಿ ಸರ್ಕಾರ ಬೀಳುತ್ತೆ’ ಎಂಬ ಉಮೇಶ್​ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಉಮೇಶ್ ಕತ್ತಿ ಯವರು ಹಿರಿಯರು. ಸರ್ಕಾರ 24 ಗಂಟೆಯಲ್ಲಿ ಬೀಳುತ್ತೆ ಎಂದು ಹೇಳಿದ್ದರು. ಆದರೆ, ಈ ಹೇಳಿಕೆ ನೀಡಿ ಆಗಲೇ 30 ಗಂಟೆಯಾಗಿದೆ. ಸರ್ಕಾರ ಬೀಳಿಸಲು ಅವರಿಂದ ಆಗಿಲ್ಲ, ಹೀಗಾಗಿ ಅವರು ಕ್ಷಮಾಪಣೆ ಕೇಳಬೇಕು ಎಂದರು.

ಪಕ್ಷದಲ್ಲಿ ಸ್ಥಾನಮಾನ ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಚಾಲನೆ ನೀಡಿದ್ದ ಶಕ್ತಿ ಯೋಜನೆಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಶಕ್ತಿ ಯೋಜನೆಯಲ್ಲಿ ಕೆಲವರು ಉತ್ತಮ ಕಾರ್ಯ ಮಾಡಿದ್ದಾರೆ. ಆದರೆ, ಇನ್ನೂ ಕೆಲವು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಯಶವಂತಪುರದಲ್ಲಿ 1 ಲಕ್ಷ ನೋಂದಣಿ ಮಾಡಿಸಿದ್ದಾರೆ. ಕೋಲಾರದಲ್ಲಿ ಶಕ್ತಿ ಯೋಜನೆ ಸಮರ್ಪಕವಾಗಿ ಪ್ರಗತಿ ಸಾಧಿಸಿಲ್ಲ ಎಂದರು.

ದೇಶಾದ್ಯಂತ ಶಕ್ತಿ ಯೋಜನೆ ಪ್ರಾರಂಭವಾಗಿ ಮೂರು ತಿಂಗಳಾಗಿದ್ದು, ಅತಿ ಹೆಚ್ಚು ನೋಂದಣಿ ಮಾಡಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಸುಮಾರು 10 ಲಕ್ಷ 46 ಸಾವಿರ ನೋಂದಣಿಯಾಗಿದೆ. ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ ಎಂದರು. (ದಿಗ್ವಿಜಯ ನ್ಯೂಸ್)

One Reply to “ಇಂದು ನೂತನ ಸಚಿವರ ಖಾತೆ ಹಂಚಿಕೆ ಫೈನಲ್: ದಿನೇಶ್ ಗುಂಡೂರಾವ್​”

Comments are closed.