ಹುಬ್ಬಳ್ಳಿ: ತಾಲೂಕಿನ ಅಮರಗೋಳ ಶ್ರೀ ವಿಠ್ಠಲ ಹರಿ ಮಂದಿರದಲ್ಲಿ ಶ್ರೀ ಸಂತ ತುಕಾರಾಮ ಮಹಾರಾಜರು ಗುರು ಉಪದೇಶ ಪಡೆದ ದಿನದ ನಿಮಿತ್ತ ದಿಂಡಿ ಉತ್ಸವವನ್ನು ಫೆಬ್ರವರಿ 6ರಿಂದ ಎರಡು ದಿನ ಏರ್ಪಡಿಸಲಾಗಿದೆ.
ಫೆ. 6ರಂದು ಮಂದಿರದಲ್ಲಿ ಪೋಥಿ ಸ್ಥಾಪನೆ, ಭಜನೆ, ಪ್ರವಚನ, ಕೀರ್ತನ ನಡೆಯಲಿದೆ. ಪಾಂಡುರಂಗ ದೇವರ 21ನೇ ವರ್ಷದ ದಿಂಡಿ ಮಹೋತ್ಸವ ಹಾಗೂ ರಂಗನಾಥ ಹುರಳಿ ಅವರಿಂದ ಕೀರ್ತನೆ ನಡೆಯಲಿದೆ.
ಫೆ. 7ರಂದು ಪಲ್ಲಕ್ಕಿ ಉತ್ಸವ, ಮಂಗಳಾರತಿ, ಮಹಾಪ್ರಸಾದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.