ತರೀಕೆರೆ: ತಾಲೂಕಿನ ಲಕ್ಕವಳ್ಳಿಯಲ್ಲಿ ಭಾವಸಾರ ಕ್ಷತ್ರಿಯ ಮಂಡಳಿಯಿಂದ ಆಯೋಜಿಸಿದ್ದ ದಿಂಡಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ಪ್ರಮುಖ ರಸ್ತೆಗಳಲ್ಲಿ ವಿಠ್ಠಲ-ರುಕ್ಮಿಣಿ ದೇವರ ಮೆರವಣಿಗೆ ನಡೆಸಿ ದೇಗುಲದಲ್ಲಿ ಹರಿಭಕ್ತ ಪರಾಯಣ ಮಾಡಲಾಯಿತು. ಹನುಮಂತರಾವ್ ರಂಗದೋಳ್ ಅವರಿಂದ ಕಾಲ ಕೀರ್ತನೆ ನಡೆಸಿದ ಬಳಿಕ, ವಿಠ್ಠಲ ರಾವ್ ತೇಲ್ಕರ್ ಅವರಿಂದ ದಿಂಡಿ ಉತ್ಸವದ ಪ್ರವಚನ ಹಾಗೂ ಭಜನೆ, ಸಂತ ಪೂಜೆ, ಪಂಡರಿ ಸಂಪ್ರದಾಯ ಭಜನೆ ನೆರವೇರಿಸಲಾಯಿತು.
ದೇವರಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ವಿನಿಯೋಗಿಸಿದ ಬಳಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಮೂರು ಗಂಟೆಯವರೆಗೆ ಸನ್ನಿಧಿಯಲ್ಲಿ ಮಹಿಳಾ ಮಂಡಳಿಯಿಂದ ಭಜನೆ ನಡೆಯಿತು. ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಬಿ.ಎಂ.ಉದಯಕುಮಾರ್ ಜಂಗಾಡೆ, ಕಾರ್ಯದರ್ಶಿ ಶಂಕರರಾವ್ ಬಾಂಗ್ರೆ ಇತರರಿದ್ದರು.