blank

ನಿತ್ಯಭವಿಷ್ಯ: ಈ ರಾಶಿಯಅವಿವಾಹಿತರಿಗೆ ವಿವಾಹಯೋಗ

Nitya Bhavisya Vijayavani

ಮೇಷ: ದಾಂಪತ್ಯದಲ್ಲಿ ಅಸಮಾಧಾನ ಹೆಚ್ಚಾಗಲಿದೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಮಹಿಳೆಯರ ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 9

ವೃಷಭ: ಹಣಕಾಸಿನ ಅಡೆತಡೆಗಳ ನಿವಾರಣೆಯಾಗುವುದು. ವಾಕ್ಚಾತುರ್ಯದಿಂದ ಮನ್ನಣೆ ಗಳಿಸುವಿರಿ. ಧಾರ್ವಿುಕ ಕಾರ್ಯಗಳಿಗೆ ಚಾಲನೆ. ಶುಭಸಂಖ್ಯೆ: 1

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ. ಕುಟುಂಬದಲ್ಲಿ ವಿವಾಹ ಕಾರ್ಯ ಜರುಗಲಿದೆ. ಸಂಸ್ಕರಣ ಘಟಕಗಳ ಮಾಲೀಕರಿಗೆ ಧನ ಲಾಭ. ಶುಭಸಂಖ್ಯೆ:3

ಕಟಕ: ವಿವಾಹಕ್ಕೆ ಅಡ್ಡಿ ಉಂಟಾಗಬಹುದು, ಎಚ್ಚರದಿಂದಿರಿ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 7

ಸಿಂಹ: ನಿಮ್ಮ ಸಾಧನೆಗೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಹಿತಶತ್ರುಗಳ ಬಾಧೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 3

ಕನ್ಯಾ: ತಂಪು ಪಾನೀಯಗಳಿಂದ ಮಾರಾಟಗಾರರಿಗೆ ಅನಿರೀಕ್ಷಿತ ನಷ್ಟ. ಅವಿವಾಹಿತರಿಗೆ ವಿವಾಹಯೋಗ. ಕೃಷಿಕರಿಗೆ ನೆಮ್ಮದಿಯ ದಿನ. ಶುಭಸಂಖ್ಯೆ:9

ತುಲಾ: ಯಂತ್ರೋಪಕರಣ ದುರಸ್ತಿಗೆ ವೆಚ್ಚ. ಲೆಕ್ಕ ಪರೀಕ್ಷಕರಿಗೆ ಧನ ಲಾಭ. ಕಾನೂನು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನಹರಿಸಿ. ಶುಭಸಂಖ್ಯೆ: 1

ವೃಶ್ಚಿಕ: ಗೃಹಬಳಕೆಯ ವಸ್ತು ಮಾರಾಟಸ್ಥರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ಲಭ್ಯ. ಆಭರಣಗಳ ಖರೀದಿಯಲ್ಲಿ ಮೋಸ. ಕಲೆಗಾರರಿಗೆ ಬೇಡಿಕೆ. ಶುಭಸಂಖ್ಯೆ: 2

ಧನಸ್ಸು: ಅಪರಿಚಿತರ ಬಗ್ಗೆ ಎಚ್ಚರವಹಿಸಿ. ಮಗನಿಂದ ಶುಭವಾರ್ತೆ. ವೈರಿಗಳಿಂದ ದೂರವಿರಿ. ಜಲ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7

ಮಕರ: ಯಕ್ಷಗಾನ ಕಲಾವಿದರಿಗೆ ಅನಾರೋಗ್ಯ ಬಾಧಿಸಲಿದೆ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಆರ್ಥಿಕ ಬಿಕ್ಕಟ್ಟು ತಲೆದೋರುವುದು. ಶುಭಸಂಖ್ಯೆ:4

ಕುಂಭ: ಅಡಕೆ ಬೆಳೆಗಾರರಿಗೆ ನಷ್ಟ. ಸಂಶೋಧಕರಿಗೆ ಉತ್ತಮ ಅವಕಾಶ ಸಿಗಲಿದೆ. ಶಿಕ್ಷಕರಿಗೆ ಅನಗತ್ಯ ತಿರುಗಾಟ. ಕುಟುಂಬದಲ್ಲಿ ಸೌಖ್ಯ. ಶುಭಸಂಖ್ಯೆ: 4

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಸಿಗುವುದು. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಅಧಿಕಾರಿಗಳೊಂದಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 5

ಭೂಮಿಯತ್ತ ಸುನೀತಾ: ಆಕೆ ಸುರಕ್ಷಿತವಾಗಿ ಹಿಂತಿರುಗಿದ್ರೆ ಸಾಕು! ಅದೇ ನಮಗೆ ಹಬ್ಬ, ಸಂಭ್ರಮ | Sunita Williams

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…