ಶ್ರದ್ಧೆ, ಪರಿಶ್ರಮದಿಂದ ಯಶಸ್ಸು

ಹಣ್ಣಿಕೇರಿ: ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮದಿಂದ ಪರೀಕ್ಷೆ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಸಲಹೆ ನೀಡಿದ್ದಾರೆ.

ಸಮಿಪದ ನಾಗನೂರ ಗ್ರಾಮದ ಶಿವಬಸವೇಶ್ವರ ಪ್ರೌಢ ಶಾಲೆಯಲ್ಲಿ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗಯೊಂದಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೇಂದ್ರ ಮಟ್ಟದ ಪಿಕನಿಕ್ ಫಜಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಇಒ ಪಾರ್ವತಿ ವಸ್ತ್ರದ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಬೋಧಿಸಬೇಕು. ಅವರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.

ಶಿಕ್ಷಣ ಇಲಾಖೆಯ ಸಿ.ವೈ.ತುಬಾಕಿ, ಪ್ರಕಾಶ ಮಾಸ್ತಿಹೊಳಿ, ಅಜ್ಜಪ್ಪ ಅಂಗಡಿ, ಎಸ್.ಗಿರಿಯಪ್ಪಗೌಡ, ಎನ್.ಚಳಕೊಪ್ಪ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಬಿ.ವಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಹಣ್ಣಿಕೇರಿ, ಲಕ್ಕುಂಡಿ, ಬಾವಿಹಾಳ, ತಿಗಡಿ ಪ್ರೌಢ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಖ್ಯ ಶಿಕ್ಷಕ ಎಸ್.ಕೆ.ತಲ್ಲೂರ, ಆರ್.ಮುದಕನಗೌಡರ, ಎಸ್.ಆರ್.ವಾರಿ, ವಿ.ಎಂ.ಪಾಟೀಲ, ಖನ್ನಿನಾಯ್ಕರ್ ಇತರರು ಇದ್ದರು. ಎಸ್.ಎ.ಮೋದಗಿ ನಿರೂಪಿಸಿದರು. ಜಯಶ್ರೀ ತಲ್ಲೂರ ವಂದಿಸಿದರು.