More

    ಬಳಕೆಯಿಲ್ಲದೆ ಪಾಳುಬಿದ್ದ ಸರ್ಕಾರಿ ಶಾಲೆ – 1960ರಲ್ಲಿ ಆರಂಭವಾಗಿದ್ದ ಸ್ಕೂಲ್

    ಕಂಪ್ಲಿ: ಪಟ್ಟಣದ 9ನೇ ವಾರ್ಡ್ ಐತಿಹಾಸಿಕ ಸೋಮಪ್ಪ ದೇವಸ್ಥಾನ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಬಳಕೆಯಿಲ್ಲದೆ ಹಾಳುಬಿದ್ದಿದ್ದು, ಗಿಡಗಂಟಿ ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

    ಕಲ್ಮಠದ ಆವರಣದಲ್ಲಿ 1960ರ ನವೆಂಬರ್ 11ರಂದು ಸರ್ವೋದಯ ಎಡೆಡ್ ಎಲಿಮೆಂಟರಿ ಶಾಲೆ(ಮಲ್ಲಯ್ಯನಶಾಲೆ) ಸ್ಥಾಪಿತವಾಯಿತು. ಶಿಕ್ಷಣ ಪ್ರೇಮಿ ಬಿ.ಡಿ.ಬಾಷಾ ಎನ್ನುವವರು ಶಾಲೆಗಾಗಿ ಸೋಮಪ್ಪ ದೇವಸ್ಥಾನ ಬಳಿ ದಾನ ಮಾಡಿದ 15 ಸೆಂಟ್ಸ್ ಭೂಮಿಯಲ್ಲಿ 2008ರಲ್ಲಿ ನೂತನ ಕಟ್ಟಡ ನಿರ್ಮಿಸಲಾಯಿತು.

    ಇದನ್ನೂ ಓದಿ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಬೆಳಗ್ಗೆ 5ರಿಂದ ಸರತಿ ಸಾಲು!

    ಸೋಮಪ್ಪ ಕೆರೆ ದಡದಲ್ಲಿ ವಾಸವಿದ್ದ ಕುಟುಂಬಗಳನ್ನು ನೂತನ ಬಡಾವಣೆಗೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಮಕ್ಕಳು ಬೇರೆ ಶಾಲೆಗೆ ವಲಸೆ ಹೋದರು. ಆದರೆ ದಾನಿಗಳ ಸ್ಥಳದಲ್ಲಿ ನಿರ್ಮಿಸಿದ ಆರು ಕೊಠಡಿಗಳ ಶಾಲಾ ಕಟ್ಟಡ ಹಾಳು ಬಿದ್ದಿದೆ. ಶಾಲೆಗೆ ಬರುವ ರಸ್ತೆ ಅತಿಕ್ರಮವಾಗಿದ್ದು, ಕೆರೆಯ ಟ್ರಾೃಕ್ ಮೂಲಕವೇ ಶಾಲೆಗೆ ತೆರಳಬೇಕಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಕಟ್ಟಡವನ್ನು ಸರ್ಕಾರ ಬಳಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು.

    ಬಳಕೆಯಿಲ್ಲದೆ ಪಾಳುಬಿದ್ದ ಸರ್ಕಾರಿ ಶಾಲೆ - 1960ರಲ್ಲಿ ಆರಂಭವಾಗಿದ್ದ ಸ್ಕೂಲ್

    ಒಂಬತ್ತನೇ ವಾರ್ಡ್‌ನ ಸರ್ಕಾರಿ ಶಾಲೆ ಕಟ್ಟಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಳಕೆಗೆ ನೀಡಲಾಗುವುದು. ಈ ಮೊದಲು ಕಟ್ಟಡವನ್ನು ಡಿಪ್ಲೊಮಾ ಕಾಲೇಜಿನ ತರಗತಿಗಳಿಗೆ ನೀಡಲಾಗಿತ್ತು. ಇದರ ಬಳಿಕ ಕಟ್ಟಡ ಬಳಸಿಕೊಂಡಿಲ್ಲ. ಇದನ್ನು ಹದ್ದು ಬಸ್ತುಗೊಳಿಸಲಾಗುವುದು.
    | ಚನ್ನಬಸಪ್ಪ ಮಗ್ಗದ, ಬಿಇಒ, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts