ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

|ಗಿರೀಶಪ್ರಸಾದ ವೆ.ರೇವಡಿ ಸವದತ್ತಿ

ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಏಣಗಿ ಗ್ರಾಮಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹಾಗಾಗಿ ಸೇತುವೆ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಈಚೆಗೆ ಸುರಿದ ಭಾರಿ ಮಳೆಯಿಂದ ಸೇತುವೆ ಮತ್ತಷ್ಟು ಅಭದ್ರವಾಗಿದ್ದು, ಸೇತುವೆ ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಭಯ ಜನರನ್ನು ಕಾಡುತ್ತಿದೆ.

ಗೋಡೆ ಕುಸಿದರೆ ಸಮಸ್ಯೆ: ಸೇತುವೆ ಮೇಲ್ಭಾಗ ಸರಿಯಾಗಿಯೇ ಇದೆ. ಆದರೆ ಸೇತುವೆ ಕೆಳಗಿನ ಗೋಡೆಗಳು ಸಂಪೂರ್ಣ ಶಿಥಿಲಗೊಂಡಿವೆ. ಮೂರು ಗೋಡೆಗಳ ಪೈಕಿ ಒಂದು ಗೋಡೆ ಭಾಗಶಃ ಕುಸಿದು ಬಿದ್ದಿದೆ. ಇದರಿಂದ ಇನ್ನುಳಿದ ಗೋಡೆಗಳ ಸದೃಢತೆ ಬಗ್ಗೆಯೂ ನಂಬಿಕೆ ಇಲ್ಲದಂತಾಗಿದೆ. ಇನ್ನುಳಿದ ಗೋಡೆಗಳೂ ಕುಸಿದರೆ ಸೇತುವೆ ನೆಲಕಚ್ಚಲಿದೆ. ಏಣಗಿ ಗ್ರಾಮಸ್ಥರಿಗೆ ಬೈಲಹೊಂಗಲಕ್ಕೆ ಹೋಗಲು ಇದೊಂದೇ ರಸ್ತೆ ಇದ್ದು, ಸೇತುವೆಗೆ ಏನಾದರೂ ಆದರೆ ಸಮಸ್ಯೆ ಉಲ್ಭಣಿಸುವುದು ಖಾತ್ರಿ ಎನ್ನುವುದು ಸಾರ್ವಜನಿಕರ ಆತಂಕ.

ಪ್ರಯಾಣ ನಿಲ್ಲಿಸಿದ ಬಸ್!: ಏಣಗಿ ಮತ್ತು ಮೂಗಬಸವ ಗ್ರಾಮದ ಜನರು ಇದೇ ಸೇತುವೆ ಮೇಲೆ ಸಂಚರಿಸುತ್ತಾರೆ. ಆದರೆ ಸೇತುವೆ ಶಿಥಿಲಗೊಂಡಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಬಸ್ ಏಣಗಿ ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ಸುಮಾರು 1 ಕಿ.ಮೀ.ವರೆಗೂ ನಡೆದು ಸೇತುವೆ ದಾಟಿ ಹೋಗಬೇಕಾಗುತ್ತದೆ. ಚಕ್ಕಡಿ, ಟ್ರ್ಯಾಕ್ಟರ್‌ಗಳನ್ನು ಕೂಡ ಸೇತುವೆ ಮೇಲೆ ದಾಟಿಸುವಂತಿಲ್ಲ. ಇದರಿಂದ ರೈತರಿಗೂ ತುಂಬ ತೊಂದರೆಯಾಗಿದೆ. ಅಷ್ಟಾದರೂ ಕೂಡ ಗ್ರಾಮಸ್ಥರು ಚಕ್ಕಡಿ ಹಾಗೂ ಟ್ರಾಕ್ಟರ್‌ಗಳನ್ನು ಇದೇ ಸೇತುವೆ ಮೇಲೆ ದಾಟಿಸುತ್ತಾರೆ.

ಸೇತುವೆ ಮರು ನಿರ್ಮಾಣ ಅಂದಾಜು 1 ಕೋಟಿ ರೂ.ವೆಚ್ಚದ ಕಾಮಗಾರಿಯಾಗುತ್ತದೆ. ಸಂಬಂಧಪಟ್ಟ ಅಕಾರಿಗಳು ಕೂಡಲೇ ಗಮನಹರಿಸಿ ಸೇತುವೆ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾತೇಶ ಯ.ಅಬ್ಬಾಯಿ, ಸೇತುವೆಯು ಈಚೆಗೆ ಸುರಿದ ಭಾರಿ ಮಳೆಗೆ ಶಿಥಿಲಗೊಂಡಿದೆ. ಈ ಕುರಿತು ಈಗಾಗಲೇ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ ಸವದತ್ತಿ ಅವರಿಗೆ ತಿಳಿಸಿದ್ದೇವೆ. ಕಾಮಗಾರಿ ಆರಂಭಿಸುವ ಭರವಸೆ ಇದೆ ಎಂದು ಹೇಳಿದರು.

ನಾವು ಈಗಾಗಲೇ ಶಿಥಿಲಗೊಂಡ ಸೇತುವೆ ಪರೀಶಿಲಿಸಿದ್ದೇವೆ. ಅನಾಹುತಗಳು ಸಂಭವಿಸದಂತೆ ಸೇತುವೆ ಸಂಚಾರ ನಿರ್ಬಂಸಿ ಸೂಚನಾ ಲಕ ಅಳವಡಿಸಿದ್ದೇವೆ. ದುರಸ್ತಿ ಹಾಗೂ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಪಿಆರ್‌ಇಡಿ ಇಲಾಖೆಗೆ ಮನವಿ ಮಾಡಲಾಗಿದೆ.
|ಚಂದ್ರಶೇಖರ ಬಾರ್ಕಿ ಪಿಡಿಒ

ಸೇತುವೆ ಪರಿಶೀಲನೆ ಮಾಡಿ ಮೇಲಕಾರಿಗಳಿಗೆ ತಿಳಿಸಿದ್ದೇವೆ. ಸಂಚಾರ ನಿರ್ಬಂಸಿ ಸೂಚನಾ ಲಕ ಅಳವಡಿಸಿದರೂ ಸಹ ಜನರು ಸಂಚರಿಸುತ್ತಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ ನಮ್ಮ ಇಲಾಖೆ ಜವಾಬ್ದಾರವಲ್ಲ.
|ಎಂ.ಜಿ.ರೇವಣಕರ  ಎಇಇ, ಸವದತ್ತಿ

Leave a Reply

Your email address will not be published. Required fields are marked *