‘ದಿಗ್ವಿಜಯ ನ್ಯೂಸ್’ ದ್ವಿತೀಯ ವರ್ಷಾಚರಣೆ

ಮಂಗಳೂರು: ದಿಗ್ವಿಜಯ ನ್ಯೂಸ್ ಎರಡನೇ ವರ್ಷದ ಸಂಭ್ರಮಾಚರಣೆಯನ್ನು ಮಂಗಳೂರಿನಲ್ಲಿ ವಿಭಿನ್ನವಾಗಿ ಆಚರಿಸಿಕೊಂಡಿದೆ.

ನಗರದ ವಿ.ಟಿ.ರೋಡ್ ನಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರದ ವಿಶೇಷ ಚೇತನಾ ಮಕ್ಕಳು ಕೇಕ್ ಕತ್ತರಿಸಿದರು.

ಮಕ್ಕಳ ಹೆತ್ತವರು, ಪೋಷಕರು, ಮುಖ್ಯ ಅತಿಥಿಗಳು, ಕೇಂದ್ರದ ಪ್ರತಿನಿಧಿಗಳು ‘ದಿಗ್ವಿಜಯ ನ್ಯೂಸ್’ ಮತ್ತು ಅದರ ಸಹ ಸಂಸ್ಥೆ ‘ವಿಜಯವಾಣಿ’ಗೆ ಶುಭ ಹಾರೈಸಿದರು.
ಮುಖ್ಯ ಅತಿಥಿ ಮೆಸ್ಕಾಂ ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ ಶೆಟ್ಟಿ ಮಾತನಾಡಿ, ಜನರಲ್ಲಿ ಧನಾತ್ಮಕ ಚೆಂತನೆ ಪ್ರೇರೇಪಿಸುವ ಉತ್ತಮ ಸುದ್ದಿಗಳನ್ನು ಕೊಡಲು ಆದ್ಯತೆ ನೀಡುತ್ತಿರುವ ‘ದಿಗ್ವಿಜಯ ನ್ಯೂಸ್’ ಮಾಧ್ಯಮ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲವಿಕಾಸ ಕೇಂದ್ರದ ಅಧ್ಯಕ್ಷ ಸುಮತಿ ಶೆಣೈ, ಜಾಹೀರಾತು ವಿಭಾಗದ ಮುಖ್ಯಸ್ಥ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಕಿಶನ್ ಶೆಟ್ಟಿ ಕಾರ‌್ಯಕ್ರಮ ನಿರ್ವಹಿಸಿದರು.