ಸುಮಲತಾ ಸಂದರ್ಶನ|ಅಭ್ಯರ್ಥಿ ಯಾರಾದರೇನು? ಸ್ಪರ್ಧೆ ಎಂದ ಮೇಲೆ ಧೈರ್ಯವಾಗಿರಬೇಕು

ಬೆಂಗಳೂರು: ಸ್ಪರ್ಧೆ ಎಂದ ಮೇಲೆ ಹಲವರು ಎದುರಿಗಿರುತ್ತಾರೆ. ಆಗಲೇ ಅದು ಸ್ಪರ್ಧೆ ಎನಿಸಿಕೊಳ್ಳುವುದು. ಅಷ್ಟಕ್ಕೂ ಎದುರಾಳಿ ಅಭ್ಯರ್ಥಿ ಯಾರಾದರೇನು? ನಾವು ಧೈರ್ಯವಾಗಿರಬೇಕು…

ರಾಜಕೀಯ ರಂಗ ಪ್ರವೇಶ ಮಾಡುತ್ತಿರುವ, ಅದಕ್ಕಾಗಿ ಮಂಡ್ಯವನ್ನೇ ಆಯ್ಕೆ ಮಾಡಿಕೊಂಡಿರುವ ನಟ, ದಿವಂಗತ ಅಂಬರೀಷ್​ ಅವರ ಪತ್ನಿ ಸುಮಲತಾ ಅಂಬರೀಷ್​ ಅವರು “ದಿಗ್ವಿಜಯಾ ನ್ಯೂಸ್”​ಗೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಮುಂದಿರುವ ಸವಾಲುಗಳು, ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.

ಅಂಬರೀಷ್​ ಬಗೆಗೆ ಮಂಡ್ಯದ ಜನರು ಹೊಂದಿದ್ದ ಭಾವನೆಗಳು, ಅವರೊಂದಿಗೆ ಜನರಿಗಿದ್ದ ಸಂಬಂಧ ಈಗ ನನಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಅವರಿಲ್ಲದ ಈ ಹೊತ್ತಿನಲ್ಲಿ ನಾನು ಜನರ ಭಾವನೆಗಳನ್ನು ಮೀರಿ ನಡೆದುಕೊಳ್ಳಲು ಸಾಧ್ಯವಿಲ್ಲ. ಸ್ಪರ್ಧೆ ಮಾಡಿ ಎಂದು ಹೇಳುತ್ತಿರುವ ಅವರ ಆಶಯಗಳನ್ನು ಲೆಕ್ಕಿಸದೇ ಇಲ್ಲ ಎನ್ನಲಾಗದು ಎಂದಿರುವ ಅವರು ಚುನಾವಣೆಗೆ ಧುಮುಕುವ ಬಗೆಗೆ ತಮಗಿರುವ ದೃಢ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಬೆಂಬಲಕ್ಕೆ ಜನಾಭಿಪ್ರಾಯ ಕೇಳುವೆ

ಇನ್ನೊಂದೆಡೆ ಬೆಂಬಲ ನೀಡುವುದಾಗಿ ಬಿಜೆಪಿ ನಾಯಕರು ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳ ಕುರಿತು ಮಾತನಾಡಿರುವ ಸುಮಲತಾ, ಬಿಜೆಪಿಯೇನಾದರೂ ಬೆಂಬಲ ನೀಡುವುದಾಗಿ ಹೇಳಿದರೆ ಅಥವಾ ಪಕ್ಷಕ್ಕೆ ಆಹ್ವಾನಿಸದರೆ ನಾನು ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುತ್ತೇನೆ. ಏಕೆಂದರೆ ಅಂಬರೀಷ್​ ತಮ್ಮ ಕಡೇದಿನಗಳಲ್ಲಿ ಇದ್ದದ್ದು ಕಾಂಗ್ರೆಸ್​ನಲ್ಲಿ ಎನ್ನುವ ಮೂಲಕ ತಾವು ಇನ್ನೂ ಕಾಂಗ್ರೆಸ್​ ಮೇಲೆ ವಿಶ್ವಾಸವಿಟ್ಟಿರುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನೊಂದೆಡೆ ರಾಜಕೀಯದಲ್ಲಿ ಹಿರಿಯರೆನಿಸಿರುವ ದೇವೇಗೌಡರನ್ನು ಯಾವುದಾದರೂ ಸನ್ನಿವೇಶದಲ್ಲಿ ಭೇಟಿಯಾಗಿ ಸಲಹೆ ಕೇಳಬೇಕಿಂದಿದ್ದರೆ ಆ ಹಜ್ಜೆ ಇಡುವಿರಾ ಎಂಬ ಪ್ರಶ್ನೆಗೆ ದೇವೇಗೌಡರನ್ನು ಭೇಟಿ ಮಾಡಿ ಸಲಹೆ ಪಡೆಯುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

https://www.youtube.com/watch?v=WwADD9crR2U