ವಿದ್ವಾಂಸರಿಂದ ಮೈಸೂರು ವಿವಿ ಘನತೆ ಹೆಚ್ಚಳ : ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್

blank

ಮೈಸೂರು: ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ನಮ್ಮ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅನೇಕ ವಿದ್ವಾಂಸರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುವ ಮೂಲಕ ವಿವಿಗೆ ಘನತೆ, ಖ್ಯಾತಿ ತಂದುಕೊಟ್ಟಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಸ್.ಶ್ರೀಕಂಠಶಾಸ್ತ್ರಿ ಅವರ 50ನೇ ಪುಣ್ಯಸ್ಮರಣೆಯ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ವಾಂಸರಿಂದ ವಿಶ್ವವಿದ್ಯಾಲಯಗಳ ಘನತೆ ಹೆಚ್ಚಲಿದೆ. ಅಂತಹ ಘನತೆಯನ್ನು ಮೈಸೂರು ವಿಶ್ವವಿದ್ಯಾಲಯ ಹೊಂದಿದೆ. ತಮ್ಮ ವಿದ್ವತ್ತಿನಿಂದ ಡಾ.ಎಸ್.ಶ್ರೀಕಂಠಶಾಸ್ತ್ರಿ ಸೇರಿದಂತೆ ಅನೇಕರು ವಿವಿ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಪ್ರೊ.ಶ್ರೀಕಂಠಶಾಸ್ತ್ರಿ ಅವರು ವಿದ್ವತ್ ಕೆಲಸವನ್ನು ಮಾಡುವುದರ ಜತೆಗೆ ಅವರು ಭಾರತದ ಸ್ವಾತಂತ್ರೃ ಸಂಗ್ರಾಮದಲ್ಲಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಹೇಳಿದರು.
ಪ್ರೊ.ಶಾಸ್ತ್ರಿ ಅವರು ಇಂಡಾಲಜಿ ಹಾಗೂ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಈ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮೊದಲ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿ.ಲೀಟ್ ಪದವಿ ಪಡೆದ ಎರಡನೆಯ ವಿದ್ವಾಂಸರಾಗಿರುವುದು ವಿಭಾಗಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಪ್ರೊ.ವೆಂಕಟಾಚಲ ಶಾಸ್ತ್ರಿ ಅವರು, ಪ್ರೊ.ಶ್ರೀಕಂಠಶಾಸ್ತ್ರಿ ಅವರ ವಿದ್ವತ್ ಕೊಡುಗೆಗಳ ಬಗ್ಗೆ ಕೆಲವು ಮಹತ್ವ ಪೂರ್ಣ ಮಾಹಿತಿ ಪುಸ್ತಕದಲ್ಲಿ ನೀಡಿದ್ದಾರೆ. ಪ್ರೊ.ಶ್ರೀಕಂಠಶಾಸ್ತ್ರಿ ಅವರು ಬಹುಭಾಷಾ ತಜ್ಞರಾಗಿದ್ದು, 12ಕ್ಕೂ ಹೆಚ್ಚು ಪುಸ್ತಕಗಳನ್ನು ಹಾಗೂ 300ಕ್ಕೂ ಹೆಚ್ಚು ಲೇಖನಗಳನ್ನು ವಿವಿಧ ಭಾಷೆಗಳಲ್ಲಿ ಪ್ರಕಟಿಸುವ ಮೂಲಕ ಇತಿಹಾಸ ಪುರಾತತ್ವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂದಿನ ಪೀಳಿಗೆಯವರಿಗೆ ಸ್ಫೂರ್ತಿದಾಯಕವಾಗಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎ.ಶಂಕರ್ ಮಾತನಾಡಿ, ಡಾ.ಶ್ರೀಕಂಠಶಾಸ್ತ್ರಿ ಜೀವನ ಸಾಧನೆಗಳ ಕುರಿತು ಪ್ರೊ.ಎಸ್.ನಾಗನಾಥ್ ಬರೆದಿರುವ ಕೃತಿಯು ಒಂದು ಅಪೂರ್ವಗ್ರಂಥ. ಪ್ರೊ.ನಾಗನಾಥ್ ಬರೆಯದೇ ಹೋಗಿದ್ದರೆ ಮಹಾ ವಿದ್ವಾಂಸರ ಅಧ್ಯಯನ ಆಳ ಅಗಲ ವಿದ್ವನ್ ಲೋಕಕ್ಕೆ ತಿಳಿಯದೇ ನಷ್ಟವಾಗುತ್ತಿತ್ತು. ಇದು ಜೀವನ ಚರಿತ್ರೆ ಮಾತ್ರವಲ್ಲ, ಸಾಧನೆಯ ಚಿತ್ರವೂ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಂಟೇಸ್ವಾಮಿ ಮಠದ ಎಂ.ಎಲ್. ವರ್ಚಸ್ವಿ ಎಸ್.ಎಸ್. ರಾಜೇ ಅರಸ್, ಶಾಸ್ತ್ರೀಯ ಸಂಗೀತಗಾರ ಆರ್.ವಿಶ್ವೇಶ್ವರನ್, ವಿದ್ವಾಂಸರಾದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಪ್ರೊ.ಎಚ್.ಎಸ್. ಹರಿಶಂಕರ್, ಡಾ.ಶ್ರೀಕಂಠಶಾಸ್ತ್ರಿ ಅವರ ಪುತ್ರ ಪ್ರೊ.ಎಸ್.ನಾಗನಾಥ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ವಿ. ಶೋಭಾ ಇತರರು ಇದ್ದರು.

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…