ಹುಬ್ಬಳ್ಳಿ : ಇಲ್ಲಿನ ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ ಪ್ಲಾಟ್ಫಾಮ್ರ್ 1 ರಲ್ಲಿ ಸೇಫ್ಕ್ಲಾಕ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭಿಸಲಾಗಿದೆ.
ಈ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಹೆಚ್ಚಿನ ಭದ್ರತೆಯನ್ನು ಹೊಂದಿರುವ ಐಒಟಿ ಆಧಾರಿತ ಸ್ಮಾರ್ಟ್ಲಾಕರ್ಗಳಾಗಿದ್ದು, ಪ್ರಯಾಣಿಕರು ತಮ್ಮ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿ ಈ ಲಗೇಜ್ ಲಾಕರ್ಗಳನ್ನು ಬಳಸಬಹುದಾಗಿದೆ.
ಈ ಸ್ಮಾರ್ಟ್ ಲಗೇಜ್ ಲಾಕರ್ಗಳು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿವೆ. ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಲಾಕರ್ ಅನ್ನು ಆಯ್ಕೆ ಮಾಡಿಕೊಂಡು, ಡಿಜಿಟಲ್ ವಿಧಾನದ ಮೂಲಕ ಪಾವತಿಸಿ ತಮ್ಮ ಲಗೇಜ್ಗಳನ್ನು ಈ ಲಾಕರ್ಗಳಲ್ಲಿ ಸುರಕ್ಷಿತವಾಗಿ ಇಡಬಹುದು.
ಸೇಫ್ ಕ್ಲಾಕ್ ಸೌಲಭ್ಯವನ್ನು ಕ್ಲಾಕ್ಟೆಕ್ ಸೊಲ್ಯೂಷನ್ಸ್ ಪ್ರೖೆವೇಟ್ ಲಿಮಿಟೆಡ್ ಒದಗಿಸಿದೆ.
ಈ ಡಿಜಿಟಲ್ ಕ್ಲಾಕ್ ರೂಮ್ ಗುತ್ತಿಗೆಯನ್ನು ಟಿಕೆಟ್ ದರ ಹೊರತುಪಡಿಸಿದ ಆದಾಯ ಯೋಜನೆ ಯಡಿಯಲ್ಲಿ ನೀಡಲಾಗಿದೆ. ಇದರಿಂದ ರೈಲ್ವೆಗೆ ಆದಾಯ ದೊರೆಯುವುದರ ಜತೆಗೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತ ಡಿಜಿಟಲ್ ಪಾವತಿ ಸೌಲಭ್ಯವನ್ನು ಒಳಗೊಂಡ ಕ್ಲಾಕ್ ರೂಮ್ ಸೇವೆ ದೊರೆಯಲಿದೆ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.