ಡಿಜಿಟಲ್​ ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಿ; ಪಾಟೀಲ

blank

ರಾಣೆಬೆನ್ನೂರ: ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀೆಗಳಿಗೆ ಬೇಕಾದ ಪರಿಕರ ಒದಗಿಸುವುದು ಡಿಜಿಟಲ್​ ಗ್ರಂಥಾಲಯದ ಮುಖ್ಯ ಉದ್ದೇಶವಾಗಿದೆ ಎಂದು ದಾವಣಗೆರೆ ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜ್​ನ ಉಪನ್ಯಾಸಕಿ ಅನ್ನರ್ಪೂಣ ಪಾಟೀಲ ಹೇಳಿದರು.
ಸ್ಥಳಿಯ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಡಿಜಿಟಲ್​ ಗ್ರಂಥಾಲಯದ ಪ್ರಾಮುಖ್ಯತೆ ಮತ್ತು ಇ ಕಲಿಕೆಯ ವಿವಿಧ ಮಾರ್ಗಗಳ ಕುರಿತು ಸೋಮವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಯ ಜನರಲ್ಲಿ ಟೆಕ್ನಾಲಜಿ ಬಳಕೆಗೆ ಉತ್ತೇಜನ ನೀಡುವ ಉದ್ದೇಶ ಡಿಜಿಟಲ್​ ಗ್ರಂಥಾಲಯದ್ದಾಗಿದೆ. ಡಿಜಿಟಲ್​ ಗ್ರಂಥಾಲಯವನ್ನು ವಿದ್ಯಾಥಿರ್ಗಳು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾಥಿರ್ಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಅನುರಾಧ ಎಸ್​., ಎಂ.ಎನ್​. ಸೂರಣಗಿ, ಸಾಯಿಲತಾ ಮಡಿವಾಳರ, ವಾಣಿಶ್ರೀ ಪಾಟೀಲ, ಡಾ. ಕವಿತಾ ಗಡ್ಡದಗೂಳಿ, ರೇಖಾ ಶಿಡೇನೂರ, ತೇಜಶ್ವಿನಿ ಕುರುವತ್ತಿ ಮತ್ತಿತರರು ಉಪಸ್ಥಿತರಿದ್ದರು.

Share This Article

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…