ಬೆಂಗಳೂರು: ಮಕ್ಕಳ ಸಬಲೀಕರಣ ಮತ್ತು ಗುಣಮಟ್ಟದ ಶಿಣಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಟೀಚ್ ಮಿಂಟ್ ಸಹಯೋಗದೊಂದಿಗೆ ಮರ್ಕ್ ಲೈಫ್ ಸೈನ್ಸ್ ಪೆ.ಲಿ ಶಾಲೆಗಳಲ್ಲಿ ’ಡಿಜಿಟಲ್ ಕ್ಲಾಸ್ ರೂಮ್ಸ್’ ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ಥಳಿಯ ಭಾಷೆಗಳಲ್ಲಿ ಆಡಿಯೊ-ವೀಡಿಯೋ ಮೂಲಕ ಹೆಚ್ಚಿನ ಕಲಿಕೆ ಸಾಧ್ಯವಾಗುತ್ತದೆ.
ಈ ಯೋಜನೆಯ ಭಾಗವಾಗಿ ಬೆಂಗಳೂರಿನ 58 ಶಾಲೆಗಳು ಮತ್ತು ಮುಂಬೈನ 42 ಶಾಲೆಗಳಿಗೆ ಡಿಜಿಟಲ್ ಸೌಲಭ್ಯ ಸಿಗಲಿದೆ. ಪ್ರತಿ ತರಗತಿಯಲ್ಲಿ ಟಚ್ ಸ್ಕ್ರೀನ್ ಫಲಕಗಳು ಹಾಗೂ ಅಗತ್ಯ ಡಿಜಿಟಲ್ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ. ಇದು ಹೊಸ ಮಾದರಿಯ ಕಲಿಕೆಯ ಅನುಭವಗಳನ್ನು ನೀಡುತ್ತದೆ.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಬ್ಲಾಕ್ನ ಜಿಲ್ಲಾ ಶಿಣಾಧಿಕಾರಿ ಅಂಜನಪ್ಪ, ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲೆ ಎಸ್.ಮಾಲಿನಿ, ಮರ್ಕ್ ಸೈನ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಧನಂಜಯ್ ಸಿಂಗ್, ಪೀಣ್ಯದ ಸೈಟ್ ಡೈರೆಕ್ಟರ್ ಎನ್.ಕೆ.ಪ್ರಸನ್ನ, ಮರ್ಕ್ ಸೈನ್ಸ್ನ ಆರ್ ಆ್ಯಂಡ್ ಡಿ ನಿರ್ದೇಶಕ ಮಾರ್ಕಸ್ ಒಬ್ಕಿರ್ಚರ್, ಮರ್ಕ್ ಲೈಫ್ ಸೈನ್ಸ್ ಫಾರ್ ಇಂಡಿಯಾದ ಸಿಎಸ್ ಆರ್ ಲೀಡ್ ಪ್ರಿಯಾಂಕಾ ಉಪಸ್ಥಿತರಿದ್ದರು.